ಒಬ್ಬ ತಾರೆಯ ಕಾರಣಕ್ಕೆ ಮತ್ತೊಬ್ಬ ತಾರೆ ತನ್ನ ಹೆಸರನ್ನೇ ಬದಲಿಸಿಕೊಂಡ ಉದಾಹರಣೆಗಳು ಕಡಿಮೆ. ಕಿಯಾರಾ ಅದ್ವಾನಿ ತನ್ನ ಹೆಸರಲ್ಲಿ ಇಂತಹುದೊಂದು ಬದಲಾವಣೆ ತಂದುಕೊಂಡಿದ್ದರು. ಅದು ಅಲಿಯಾ ಭಟ್‌ ಕಾರಣಕ್ಕೆ.

ಕಿಯಾರ ಫಿಟ್‌ನೆಸ್ ರಹಸ್ಯ

ಅಲಿಯಾ ಈಗ ಸದ್ಯ ಬಾಲಿವುಡ್‌ನಲ್ಲಿ ಬೇಡಿಕೆ ಇರುವ ನಟಿ. ಕಿಯಾರಾ ಕೂಡ ಈಗೀಗ ಬೇಡಿಕೆಯಲ್ಲಿದ್ದಾರೆ. 2014ರಲ್ಲಿ ‘ಫಗ್ಲಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದಾಗ ಈಕೆಯ ಅಸಲಿ ಹೆಸರು ಅಲಿಯಾ ಅದ್ವಾನಿ. ಅದಾಗಲೇ ಅಲಿಯಾ ಭಟ್‌ ಭರವಸೆ ಮೂಡಿಸಿದ್ದರಿಂದ ಸ್ವತಃ ಸಲ್ಮಾನ್‌ ಖಾನ್‌ ಅವರು ಅಲಿಯಾ ಅದ್ವಾನಿಗೆ ಹೆಸರು ಬದಲಾಯಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಯಾಕೆಂದರೆ ಭವಿಷ್ಯದಲ್ಲಿ ಅಲಿಯಾ ಭಟ್‌ ಮುಂದೆ ಅಲಿಯಾ ಅದ್ವಾನಿ ಕಾಂಪಿಟೇಷನ್‌ ಎದುರಿಸುವುದು ಕಷ್ಟ, ಐಡೆಂಟಿಟಿ ಕ್ರಿಯೇಟ್‌ ಮಾಡಿಕೊಳ್ಳುವುದು ಕಷ್ಟಎನ್ನುವ ಕಾರಣ ಇದ್ದಿರಬೇಕು.

ಲಸ್ಟ್ ಸ್ಟೋರೀಸ್ ದೃಶ್ಯದ ಬಗ್ಗೆ ಕಿಯಾರ ಹೇಳಿದ್ದೇನು.?

ಹೀಗೆ ಸಲ್ಮಾನ್‌ ಕೊಟ್ಟಸಲಹೆಯನ್ನು ಶಿರಸಾ ವಹಿಸಿ ಪಾಲಿಸಿದ ಅಲಿಯಾ ಅದ್ವಾನಿ ತನ್ನ ಹೆಸರನ್ನು ‘ಕಿಯಾರಾ ಅದ್ವಾನಿ’ ಎಂದು ಬದಲಾಯಿಸಿಕೊಂಡಿದ್ದಾರೆ. ಇದು ಹೆಚ್ಚಿನವರಿಗೆ ತಿಳಿದೇ ಇರಲಿಲ್ಲ. ಈಗ ಈ ಕಾರಣವನ್ನು ಸ್ವತಃ ಕಿಯಾರಾ ಅದ್ವಾನಿಯೇ ಹೇಳಿಕೊಂಡಿದ್ದಾರೆ.