Asianet Suvarna News Asianet Suvarna News

ಸೈಫ್ ಮಗಳ ಮೈಮಾಟಕ್ಕೆ ಮಾರುಹೋದ ಬಾಲಿವುಡ್

Saif Ali Khans daughter

ಮುಂಬೈ(ಅ.05): ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸದ್ಯಕ್ಕೆ ಬಿಟೌನ್ ನಲ್ಲಿ  ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾಳೆ.

ಮೊದಲು ಗುಂಡಗಿದ್ದ ಸಾರಾ ಈಗ ಬಳುಕುವ ಬಳ್ಳಿಯಂತಾಗಿರೋದು ಎಲ್ಲರ ಹುಬ್ಬೇರಿಸಿತ್ತು. ಅಷ್ಟರಲ್ಲೇ ಸಾರಾ ಬಾಲಿವುಡ್ ಗೆ ಪದಾರ್ಪಣೆ ಮಾಡ್ತಿದ್ದಾರೆ ಅನ್ನೋ ಸುದ್ದಿ ಕೂಡ ಸಿಕ್ಕಿದೆ.

ಕರಣ್ ಜೋಹರ್ ನಿರ್ದೇಶನದ ಸ್ಟೂಡೆಂಟ್ ಆಫ್ ದಿ ಇಯರ್-2ನಲ್ಲಿ ಸಾರಾ, ಟೈಗರ್ ಶ್ರಾಫ್ ಜೊತೆ ನಟಿಸ್ತಾರೆ ಅನ್ನೋ ಸುದ್ದಿ ಇತ್ತು. 

ಆದರೆ ತಾಯಿ ಅಮೃತಾ ಸಿಂಗ್ ನಿರಾಕರಿಸಿದ್ರಿಂದ ಈ ಚಿತ್ರದಿಂದ ಸಾರಾ ಹೊರನಡೆದಿದ್ದಾರಂತೆ. ಸಾರಾ, ಅನಿಲ್ ಶರ್ಮಾರ ಜೀನಿಯಸ್ ಚಿತ್ರದ ಮೂಲಕ ಬಿಟೌನ್ ಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾಳೆ. ಹೀಗಾಗಿ ಸಾರಾ ಖಾನ್ ಬಾಲಿವುಡ್ ನಲ್ಲಿ ಭಾರಿ ಡಿಮ್ಯಾಂಡ್ ಬಂದಿದೆಯಂತೆ.

Follow Us:
Download App:
  • android
  • ios