ಚಿತ್ರದ ಪೋಸ್ಟರ್ ಮೂಲಕವೇ ಜನರಲ್ಲಿ ಕುತೂಹಲ ಮೂಡಿಸಿರುವ ಚಿತ್ರ ‘ರಾಬರ್ಟ್’. ಚಾಲೆಂಜಿಂಗ್ ಸ್ಟಾರ್ ನಾಯಕತ್ವದ ಜೊತೆಗೆ ತರುಣ ಸುಧೀರ್ ನಿರ್ದೇಶನದ ಈ ಚಿತ್ರಕ್ಕೆ ’ಪ್ರೇಮಂ’ ಖ್ಯಾತಿಯ ಸಾಯಿ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ರಾಬರ್ಟ್ ಜೊತೆ ಕೆಜಿಎಫ್-2 ಶೂಟಿಂಗ್ ಶುರು!

 

’ರಾಬರ್ಟ್’ ಚಿತ್ರದಲ್ಲಿ ಪರಭಾಷಾ ನಾಯಕಿಯರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.

 

ಈ ಚಿತ್ರದ ಮುಹೂರ್ತ ಯಾವಾಗ, ಚಿತ್ರೀಕರಣದ ಕಥೆಯೇನು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮೇ 6 ಕ್ಕೆ ಈ ಚಿತ್ರ ಅಧಿಕೃತವಾಗಿ ಚಿತ್ರೀಕರಣ ಶುರು ಮಾಡುತ್ತಿದ್ದು ಚಿತ್ರತಂಡದ ಪ್ರಕಾರ ಫಸ್ಟ್‌ ಶೆಡ್ಯೂಲ್‌ ಐದು ದಿನಗಳಿಗೆ ಫಿಕ್ಸ್‌ ಆಗಿದೆ. ಅದೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಅನಂತರ ಚೆನ್ನೈ, ಹೈದರಾಬಾದ್‌ ಮತ್ತು ವಿಶಾಖಪಟ್ಟಣಂನಲ್ಲಿಯೂ ಚಿತ್ರೀಕರಣ ನಡೆಯಲಿದೆ.