ಪ್ರೇಮಿಗಳಿಗೆ ಲವ್ ಆ್ಯಂಥಮ್ ಕೊಟ್ಟ ಸಾಹೋ !
ಸಾಹೋ ಟೀಂನಿಂದ ಎರಡನೇ ಟೀಸರ್ ರಿಲೀಸ್ | ರೆಡ್ ಕಲರ್ ಗೌನ್‌ನಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ ಶ್ರದ್ಧಾ ಕಪೂರ್ |
ಬಾಹುಬಲಿ ಪ್ರಭಾಸ್, ಬಿ- ಟೌನ್ ಚೆಲುವೆ ಶ್ರದ್ಧಾ ಕಪೂರ್ 'ಸಾಹೋ' ಚಿತ್ರ ಭಾರೀ ನಿರೀಕ್ಷೆ ಮೂಡಿಸಿದ್ದು ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ. ಇದೇ ಆಗಸ್ಟ್ 30 ರಂದು ರಿಲೀಸ್ ಆಗಲಿದೆ.
ಸಾಹೋ ಚಿತ್ರದ ಎರಡನೇ ಟೀಸರ್ ರಿಲೀಸ್ ಆಗಿದೆ. ಶ್ರದ್ಧಾ, ಪ್ರಭಾಸ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರೇಮಿಗಳಿಗೆ ಈ ಹಾಡು ರಾಷ್ಟ್ರಗೀತೆ ಇದ್ದ ಹಾಗೆ ಎಂದರೆ ತಪ್ಪಾಗಲಿಕ್ಕಿಲ್ಲ.
ಖ್ಯಾತ ಗಾಯಕ ಗುರು ರಾಂಧವ ಈ ಹಾಡನ್ನು ಹಾಡಿದ್ದಾರೆ. ಕೆಂಪು ಬಣ್ಣದ ಗೌನ್ ನಲ್ಲಿ ಶ್ರದ್ಧಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸುಜಿತ್ ಸಾಹೋ ಚಿತ್ರವನ್ನು ನಿರ್ದೇಶಿಸಿದ್ದಾರೆ.