Asianet Suvarna News Asianet Suvarna News

ನೆಟ್‌ಫ್ಲಿಕ್ಸ್‌ನಲ್ಲಿ ಇಂದಿನಿಂದ ಸೇಕ್ರೆಡ್ ಗೇಮ್ಸ್; ಸೋಷಿಯಲ್ ಮೀಡಿಯಾದಲ್ಲಿ ಇದರದ್ದೇ ಹವಾ!

ಕ್ರೈಂ ಥ್ರಿಲ್ಲಿಂಗ್ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸೇಕ್ರೆಡ್ ಗೇಮ್ಸ್- 1 ಮುಕ್ತಾಯವಾದಾಗ ಪ್ರೇಕ್ಷಕರಲ್ಲಿ ಬೇಸರ ತರಿಸಿತ್ತು. ಇದೀಗ ಸೇಕ್ರೆಡ್ ಗೇಮ್ಸ್-2 ಶುರುವಾಗಲಿದೆ. ನೆಟ್‌ಫ್ಲಿಕ್ಸ್ ನಲ್ಲಿ ಇಂದು ಮಧ್ಯರಾತ್ರಿಯಿಂದಲೇ ಶುರುವಾಗಲಿದೆ. 

Sacred Games 2 Is Now Streaming on Netflix in India on Independence Day midnight
Author
Bengaluru, First Published Aug 15, 2019, 2:46 PM IST
  • Facebook
  • Twitter
  • Whatsapp

ನವಾಜುದ್ದೀನ್ ಸಿದ್ಧಿಕಿ, ಸೈಫ್ ಅಲಿ ಖಾನ್ ನಟನೆಯ ಸೆಕ್ರೆಡ್ ಗೇಮ್ಸ್- 1 ಸೀರೀಸ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ನವಾಜುದ್ದೀನ್ ಸಿದ್ಧಿಕಿ ಗಣೇಶ್ ಗೈತೊಂಡೆಯಾಗಿ ನಟಿಸಿದ್ದರೆ ಸರ್ತಾಜ್ ಸಿಂಗ್ ಆಗಿ ಸೈಫ್ ಅಲಿ ಖಾನ್ ನಟಿಸಿದ್ದರು. ಅನುರಾಗ್ ಕಶ್ಯಪ್ ಹಾಗೂ ನೀರಜ್ ಗಯವಾನ್ ನಿರ್ದೇಶನ ಮಾಡಿದ್ದರು. ಈ ಕ್ರೈಮ್ ಥ್ರಿಲ್ಲರ್ ಸೀರೀಸ್ ಸೀಸನ್- 2 ಶುರುವಾಗಲಿದೆ. 

ನೆಟ್ ಫ್ಲಿಕ್ಸ್ ನಲ್ಲಿ ಇಂದು ರಾತ್ರಿ ಅಂದರೆ ಆಗಸ್ಟ್ 15 ರ ಮಧ್ಯರಾತ್ರಿಯಿಂದಲೇ ಪ್ರಸಾರವಾಗಲಿದೆ. 

ವಿಕ್ರಂ ಚಂದ್ರರ ಕಾದಂಬರಿ ಆಧಾರಿತ ಸೀರೀಸ್ ಇದು. ಗೆಳೆತನ- ವೈರತ್ವದ ನಡುವೆ ನಡೆಯುವ ಕಥೆ ಇದಾಗಿದೆ. ಸೇಕ್ರೆಡ್ ಗೇಮ್ಸ್- 1 ಕೊನೆಯಾದಾಗಿನಿಂದ ಸೇಕ್ರೆಡ್ ಗೇಮ್ಸ್- 2 ಶುರುವಾಗಲಿದೆ. ಪಂಕಜ್ ತ್ರಿಪಾಠಿ, ಸುರ್ವೀನ್ ಚಾವ್ಲಾ, ರಣವೀರ್ ಶೋರೆ, ಅಮರುಖ್ ಸುಭಾಷ್, ಕಲ್ಕಿ ಕೊಚ್ಲಿನ್, ಎಲ್ನಾಜ್ ನೋರೋಜಿ, ಸಮೀರ್ ಕೊಚ್ಚಾರ್, ಸೈಫ್ ಅಲಿ ಖಾನ್ ಹಾಗೂ ನವಾಜುದ್ದೀನ್ ಸಿದ್ಧಿಕಿ ನಟಿಸಿದ್ದಾರೆ.  

ಸೇಕ್ರೆಡ್ ಗೇಮ್ಸ್ -2 ಗೆ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 


 

Follow Us:
Download App:
  • android
  • ios