ಸಿನಿಮಾ ಬಿಡುಗಡೆಗೂ ಮುನ್ನ ಸೆಲೆಬ್ರಿಟಿ­ಗಳಿಗೆ ಒಂದು ಶೋ ಏರ್ಪಡಿಸಲಾಗಿತ್ತು. ಅದಕ್ಕೆ ಅಂಬಿ ಬಂದಿದ್ದರು. ಸಿನಿಮಾ ಮುಗಿದು 20 ನಿಮಿಷ ಆದರೂ ಅವರು ಕುರ್ಚಿ ಬಿಟ್ಟೇಳಲಿಲ್ಲವಂತೆ. ಅವರ ಕಣ್ಣತುಂಬ ಧಾರಾಕಾರ ನೀರು!‘ ಕಳೆದ 30 ವರ್ಷಗಳಿಂದ ಅಂಬರೀಶ್‌ ಅವರನ್ನು ನೋಡುತ್ತಿದ್ದೀನಿ. ಅವರು ಈ ಮಟ್ಟಕ್ಕೆ ಭಾವುಕರಾಗಿದ್ದು ಕಂಡಿಲ್ಲ. ಕೊನೆಯಲ್ಲಿ ಅವರು ಹೇಳಿದ್ದು, ಇಂಥ ಸಿನಿಮಾಗಳನ್ನೆಲ್ಲ ಮಾಡಿ ನಮಗ್ಯಾಕೆ ತೊಂದ್ರೆ ಕೊಡ್ತೀರಿ ಅಂತ. ಅಂಥ ಅಂಬರೀಶ್‌ ಅವರನ್ನೇ ಈ ಸಿನಿಮಾ ಅಷ್ಟುಕಾಡಿದೆ ಅಂದರೆ ಸಾಮಾನ್ಯ ಜನಕ್ಕೆ ತಟ್ಟದೇ ಇರುತ್ತಾ' ಎಂದ ನಾರಾಯಣ್‌ ಮಾತಲ್ಲಿ ಸಿನಿಮಾ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ.

ಅಂಬರೀಶ್ ಅವರನ್ನು ಯಾವತ್ತೂ ಆ ಸ್ಥಿತಿಯಲ್ಲಿ ನಾನು ನೋಡಿ­ರಲಿಲ್ಲ' ಎಂದರು ಎಸ್‌. ನಾರಾಯಣ್‌. ‘ಮನಸು ಮಲ್ಲಿಗೆ' ಸಿನಿಮಾ ಬಿಡುಗಡೆ­ಯಾದ ಬಳಿಕ ಕರೆದಿದ್ದ ಪತ್ರಿಕಾ­ಗೋಷ್ಠಿಯದು.

ಸಿನಿಮಾ ಬಿಡುಗಡೆಗೂ ಮುನ್ನ ಸೆಲೆಬ್ರಿಟಿ­ಗಳಿಗೆ ಒಂದು ಶೋ ಏರ್ಪಡಿಸಲಾಗಿತ್ತು. ಅದಕ್ಕೆ ಅಂಬಿ ಬಂದಿದ್ದರು. ಸಿನಿಮಾ ಮುಗಿದು 20 ನಿಮಿಷ ಆದರೂ ಅವರು ಕುರ್ಚಿ ಬಿಟ್ಟೇಳಲಿಲ್ಲವಂತೆ. ಅವರ ಕಣ್ಣತುಂಬ ಧಾರಾಕಾರ ನೀರು!
‘ ಕಳೆದ 30 ವರ್ಷಗಳಿಂದ ಅಂಬರೀಶ್‌ ಅವರನ್ನು ನೋಡುತ್ತಿದ್ದೀನಿ. ಅವರು ಈ ಮಟ್ಟಕ್ಕೆ ಭಾವುಕರಾಗಿದ್ದು ಕಂಡಿಲ್ಲ. ಕೊನೆಯಲ್ಲಿ ಅವರು ಹೇಳಿದ್ದು, ಇಂಥ ಸಿನಿಮಾಗಳನ್ನೆಲ್ಲ ಮಾಡಿ ನಮಗ್ಯಾಕೆ ತೊಂದ್ರೆ ಕೊಡ್ತೀರಿ ಅಂತ. ಅಂಥ ಅಂಬರೀಶ್‌ ಅವರನ್ನೇ ಈ ಸಿನಿಮಾ ಅಷ್ಟುಕಾಡಿದೆ ಅಂದರೆ ಸಾಮಾನ್ಯ ಜನಕ್ಕೆ ತಟ್ಟದೇ ಇರುತ್ತಾ' ಎಂದ ನಾರಾಯಣ್‌ ಮಾತಲ್ಲಿ ಸಿನಿಮಾ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ.

‘ಈ ಸಿನಿಮಾ ಪ್ರೇಮಿಗಳಿಗೆ, ಪ್ರೇಮಿಗಳನ್ನ ಹೆತ್ತೋರಿಗೆ, ಪ್ರೀತಿಸಿ ಅನಾಹುತಕ್ಕೆ ಕೈ ಹಾಕೋರಿಗೆ ಎಲ್ಲರಿಗೂ ಪಾಠ. ಈ ಸಿನಿಮಾ ಆರಂಭಿಸುವ ಮುನ್ನ ನಿರ್ಮಾಪಕ ರಾಕ್‌ಲೈನ್‌ ಅವರಲ್ಲಿ ಎರಡು ಬೇಡಿಕೆ ಇಟ್ಟಿದ್ದೆ. ಒಂದು ಮೂಲ ಸಿನಿಮಾ ಸೈರಾಟ್‌ನ ನಾಯಕಿ ಹಾಗೂ ಸಂಗೀತ ನಿರ್ದೇಶಕ ಅಜಯ್‌ ಅತುಲ್‌ ಅವರನ್ನೇ ಮನಸ್ಸು ಮಲ್ಲಿಗೆಗೂ ಕರೆಸಬೇಕು ಅಂತ. ಯಾಕೆಂದರೆ ಅವರಿಬ್ಬರೇ ಈ ಸಿನಿಮಾದ ಜೀವಾಳ. ಇದು ರಾಕ್‌ಲೈನ್‌ ಅವರಿಗೂ ಸವಾಲು. ಆದರೆ ನನ್ನಲ್ಲಿ ವಿಶ್ವಾಸವಿಟ್ಟು ಬಹಳ ಹೆಣಗಾಡಿ ಅವರಿಬ್ಬರನ್ನೂ ಕನ್ನಡಕ್ಕೆ ತರುವಲ್ಲಿ ಯಶಸ್ವಿಯಾದರು. ನಾಯಕನ ಪಾತ್ರಕ್ಕೆ 8000 ಮಂದಿ ಪ್ರೊಫೈಲ್‌ ಕಳುಹಿಸಿದರೂ ಯಾರೂ ಸೆಲೆಕ್ಟ್ ಆಗಲಿಲ್ಲ. ಆದರೆ ನಟ ಸತ್ಯಪ್ರಕಾಶ್‌ ಅವರ ಮಗ ನಿಶಾಂತ್‌ ಫೆäಟೋ ನೋಡಿದ ಕೂಡಲೇ ಈ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾನೆ ಅನಿಸಿ ಆತನನ್ನು ಆಯ್ಕೆ ಮಾಡಿದೆ' ಎಂದರು ನಾರಾಯಣ್‌.

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರಿಗೆ ಅದ್ಭುತ ಲೊಕೇಶನ್‌ನಲ್ಲಿ ಫ್ರೆಶ್‌ಫೇಸ್‌ಗಳನ್ನು ನೋಡೋದೆ ಖುಷಿ ಕೊಟ್ಟಿದೆಯಂತೆ. ‘ಹೊಸಬರಿಬ್ಬರೂ ತೆರೆಯ ಮೇಲೆ ಅದ್ಭುತವಾಗಿ ನಟಿಸಿದ್ದಾರೆ' ಎಂದರು. 
ನಾಯಕ ನಿಶಾಂತ್‌ ಮಾತನಾಡಿ, ‘16 ಎಮ್‌ಎಮ್‌ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಬೇಕು ಅನ್ನೋದು ನನ್ನ ಚಿಕ್ಕಂದಿನ ಆಸೆ. ರಾಕ್‌ಲೈನ್‌ ಸ್ಟುಡಿಯೋಗೆ ಕರೆಸಿ ಎಸ್‌.ನಾರಾಯಣ್‌ ಸಿನಿಮಾಗೆ ಹೀರೋ ಅಂದಾಗ ನಂಬಲೇ ಆಗಲಿಲ್ಲ. ಈ ಸಿನಿಮಾದಲ್ಲಿ ಬಾವಿಗೆ ಹಾರುವ ಸೀನ್‌ ಇತ್ತು. ಈಜು ಗೊತ್ತಿದ್ದರೂ ಮೇಲೆ ಬರೋದಿಕ್ಕೆ ಬಹಳ ಕಷ್ಟಆಯ್ತು' ಎಂದರು.

ನಾಯಕಿ ರಿಂಕು ರಾಜಗುರು, ಸಹ ನಿರ್ಮಾಪಕ ಆಕಾಶ್‌ಚಾವ್ಲಾ, ಛಾಯಾಗ್ರಾಹಕ ಮನೋಹರ ಜೋಷಿ ಪತ್ರಿಕಾಗೋಷ್ಠಿಯಲ್ಲಿದ್ದರು.

ವರದಿ: ಕನ್ನಡಪ್ರಭ, ಸಿನಿವಾರ್ತೆ