ಸುಮಾರು 50 ವರ್ಷದ ಹಿಂದೆ ಮೈಸೂರನಲ್ಲಿಯೇ ತಮ್ಮ ಮೊದಲ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಎಸ್.ಜಾನಕಿ ಇಂದು ಇದೇ ಮೈಸೂರಲ್ಲಿ ಕೊನೆಯ ಹಾಡು ಹಾಡಿ ತಮ್ಮ ಗಾನ ಪಯಣ ಮುಗಿಸಿದ್ದಾರೆ.
ಗಾನಕೋಗಿಲೆ ಎಸ್.ಜಾನಕಿ ಮೈಸೂರಲ್ಲಿ ತಮ್ಮ ಕೊನೆಯ ಹಾಡನ್ನ ಹಾಡಿ ಗಾಯನ ಲೋಕಕ್ಕೆ ವಿದಾಯ ಹೇಳಿದ್ದಾರೆ. ಸುಮಾರು 50 ವರ್ಷದ ಹಿಂದೆ ಮೈಸೂರನಲ್ಲಿಯೇ ತಮ್ಮ ಮೊದಲ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಎಸ್.ಜಾನಕಿ ಇಂದು ಇದೇ ಮೈಸೂರಲ್ಲಿ ಕೊನೆಯ ಹಾಡು ಹಾಡಿ ತಮ್ಮ ಗಾನ ಪಯಣ ಮುಗಿಸಿದ್ದಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕಲ್ಪಿಸಲಾಗಿದೆ. ಇನ್ನೂ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ನಟ ಶ್ರೀನಾಥ್, ಹರಿಣಿ, ಪ್ರತಿಮಾದೇವಿ, ಭಾರತಿ ವಿಷ್ಣುವರ್ಧನ್, ಜಯಂತಿ, ಹೇಮಚೌಧರಿ, ಶೈಲಶ್ರೀ, ಶಿವರಾಂ ಸೇರಿ ಹಲವರು ಭಾಗವಹಿಸಿದ್ದರು.
