'ರೌಡಿ ಬೇಬೆ' ಸಾಯಿ ಪಲ್ಲವಿ ಮದುವೆ ವಿಚಾರ ಈಗ ಟಾಕ್ ಆಫ್ ದಿ ಟೌನ್. ಇದಕ್ಕೆ ಗರಂ ಆದ ಪಲ್ಲವಿ ರಿಯ್ಯಾಕ್ಟ್ ಮಾಡಿದ್ದು ಹೇಗೆ ಗೊತ್ತಾ?

 

ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಲ್ಲಿ ನಟಿಸುತ್ತಿರುವ ಸಾಯಿ ಈಗ ಮದುವೆ ವಿಚಾರದ ಬಗ್ಗ ಕೊಂಚ ಬೆಸರಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ನಟ AL Vijay ಹಾಗೂ ಸಾಯಿ ಪಲ್ಲವಿ ಪ್ರೀತಿಸುತ್ತಿದ್ದಾರೆ, ಇನ್ನೇನು ಕೆಲವು ದಿನಗಳಲ್ಲಿ ಮದುವೆ ಆಗುತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ. ಇಷ್ಟು ದಿನಗಳ ಕಾಲ ಇದನ್ನು ಕಿವಿಗೇ ಹಾಕಿಕೊಳ್ಳದ ಪಲ್ಲವಿ ಸುಮ್ಮನಿದ್ದರು. ಆದರೆ ಈಗ ಗರಂ ಆಗಿದ್ದಾರೆ. ಏಕೀ ಮುನಿಸು?

ಚಿತ್ರ ಫ್ಲಾಪ್: ಅರ್ಧ ಸಂಭಾವನೆ ಮರಳಿಸಿದ ಮೊದಲ ನಟಿ!

 

ಈ ಹಿಂದೆ ನಟ ವಿಜಯ್ 2011ರಲ್ಲಿ 'ಹೆಬ್ಬುಲಿ' ನಟಿ ಅಮಲಾ ಪೌಲರನ್ನು ಮದುವೆ ಆಗಿದ್ದರು. ಕೆಲವು ವಿಚಾರಗಳ ಮೇಲೆ ಈ ಸಂಬಂಧ 2017ರಲ್ಲಿಯೇ ಮುರಿದು ಬಿದ್ದಿತ್ತು. ಅದೇ ಟೈಮಲ್ಲಿ ಇತ್ತ ಪ್ರೇಮಂ ಚಿತ್ರದಿಂದ ಸಾಯಿ ಪಲ್ಲವಿಯೂ ಪ್ರಸಿದ್ಧರಾಗಿದ್ದರು. ಅಷ್ಟೇ ಅಲ್ಲ ಅವರಿಬ್ಬರ ನಡುವೆ ಕುಛ್ ಕುಛ್ ಇದೆ ಎಂಬ ಸುದ್ದಿಯೂ ಹರಿದಾಡಲು ಆರಂಭವಾಯಿತು.

ಹೀಗೆ ಇದ್ದಾಗಲೇ ವಿಜಯ್ ಅವರು ನಟಿಸಿರುವ ಬಹುತೇಕ ಚಿತ್ರಗಳು ಫ್ಲಾಪ್ ಆದವು. ಇದೀಗ ಸೋಲಿನಿಂದ ಬೇಸತ್ತ ವಿಜಯ್, ತಮ್ಮ ಕರಿಯರ್‌ನಲ್ಲಿ ಬಿಗ್ ಹಿಟ್ ಬೇಕೇ ಬೇಕು. ಅದಕ್ಕೆ ಸಾಯಿ ಪಲ್ಲವಿ ತಮ್ಮ ಚಿತ್ರಕ್ಕೆ ನಟಿ ಆದರೆ ಮಾತ್ರ ಸಾಧ್ಯ,' ಎಂದು ವಿಜಯ್ ನಿರ್ದೇಶರ ಬಳಿ ಕೇಳಿ ಕೊಂಡಿದ್ದಾರೆ. ವಿಜಯ್ ಬೇಡಿಕೆ ಪರಿಣಾಮ ಬಿದ್ದಿದ್ದು ಸಾಯಿ ಮೇಲೆ. ಅವಳೇ ಟಾರ್ಗೆಟ್ ಆಗುವಂತಾಗಿದೆ. ಮತ್ತೆ ಇವರಿಬ್ಬರು ಸಪ್ತಪದಿ ತುಳಿಯುತ್ತಾರೆಂಬ ಗುಸು ಗುಸು ಟಾಲಿವುಡ್‌ ಅಂಗಳದಲ್ಲಿ ಕೇಳಿ ಬರುತ್ತಿದೆ.

 

ಈ ಬೇಡಿಕೆಯಿಂದ ವಿಜಯ್ ಮೇಲೆ ಸಾಯಿ ಮುನಿಸಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಮಾತನಾಡಿಕೊಳ್ಳುವುದನ್ನೂ ನಿಲ್ಲಿಸಿ ಬಿಟ್ಟಿದ್ದಾರಂತೆ. ಮುಖ ಕೊಟ್ಟು ಮಾತನಾಡಿಕೊಳ್ಳುವುದೂ ಇಲ್ಲವೆಂದು ತಂತ್ರಜ್ಞರು ಹೇಳುತ್ತಿದ್ದಾರೆ.

ಹೆಣ್ಣು ಜೀವವೇ ಹಾಗೆ. ಇಂಥ ವಿಷಯಗಳಲ್ಲಿ ತುಸು ಸೂಕ್ಷ್ಮವಾಗಿರುತ್ತಾಳೆ. ಅದನ್ನು ಗಂಡು ಅರ್ಥ ಮಾಡಿಕೊಂಡು, ನಡೆದುಕೊಳ್ಳಬೇಕಷ್ಟೆ.