ಶೋ ಒಂದರಲ್ಲಿ ತಮ್ಮ ಸೆಕ್ಸ್ ಲೈಫ್ ಬಗ್ಗೆ ಮಾತನಾಡಿದ್ದ  ಬಾಲುವುಡ್ ನ ಅರ್ಜುನ್ ಕಪೂರ್  ಅಂತೂ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ. ನಟಿಯೊಬ್ಬರ ಜತೆ ಅರ್ಜುನ್  ಕಪೂರ್ ಓಡಾಡುತ್ತಿದ್ದಾರೆ ಎಂಬ ಗಾಸಿಪ್ ಇದ್ದರೂ ಆಧಾರ ಇರಲಿಲ್ಲ. ಈಗ ಎಲ್ಲವೂ ಲಭ್ಯವಾಗಿದೆ.

ಮುಂಬೈ[ನ.24] ಲೈಕಾ ಹಾಗೂ ಅರ್ಜುನ್ ಕಪೂರ್ ನಡುವಿನ ಸಂಬಂಧ ಹಲವಾರು ಬಾರಿ ಸುದ್ದಿಯಾಗಿತ್ತು. ಆದರೆ ಯಾವತ್ತು ಮಲೈಕಾ ತೀರ್ಪುಗಾರಳಾಗಿರುವ 'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಶೋಗೆ ಅರ್ಜುನ್ ಕಪೂರ್ ಬಂದರೋ ಆವತ್ತು ಈ ವಿಚಾರ ಮತ್ತಷ್ಟು ಜೋರಾಯ್ತು. ಶೋನಲ್ಲಿ ಪರಸ್ಪರ ಕೈ ಹಿಡಿದು ವೇದಿಕೆ ಏರಿದ ಅರ್ಜುನ್ ಕಪೂರ್ ಹಾಗೂ ಮಲೈಕಾ ಪೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದವು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಅರ್ಜುನ್ ಕಪೂರ್ ಮತ್ತು ಮಲೈಕಾ ಪಾರ್ಟಿಯೊಂದನ್ನು ಮುಗಿಸಿ ಹೊರಬರುತ್ತಿದ್ದಾರೆ. ಅರ್ಜುನ್ ಕಪೂರ್ ಮುಖ ಮುಚ್ಚಿಕೊಳ್ಳುತ್ತಿರುವುದು ಮಾತ್ರ ಯಾಕೆ? ಎಂದು ಅರ್ಥ ಆಗಿಲ್ಲ. ಕಳೆದ ಕೆಲ ದಿನಗಳಿಂದ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಮದುವೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ವಯ ಇವರಿಬ್ಬರೂ ಮುಂದಿನ ವರ್ಷ ಅಂದರೆ 2019ರಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಿವೆ.

ಅರ್ಜುನ್ ಕಪೂರ್ ಸೆಕ್ಸ್ ಲೈಫ್ ಬಗ್ಗೆ ರಿವೀಲ್..?

ವರದಿಗಳು ಹೇಳುವಂತೆ ಕರಣ್ ಜೋಹರ್ ಆಯೋಜಿಸಿದ್ದ ಪಾರ್ಟಿಯೊಂದಕ್ಕೆ ಇಬ್ಬರು ಜತೆಯಾಗಿ ಹೋಗಿ ಹಿಂದಕ್ಕೆ ಬಂದಿದ್ದಾರೆ.

View post on Instagram