ಖಾಸಿಂ ಕೈ ಸೇರಿತು ‘ಕನ್ನಡ ಕೋಗಿಲೆ’ ಟ್ರೋಫಿ?
ಕನ್ನಡಿಗರ ಮನ ಗೆದ್ದ ರಿಯಾಲಿಟಿ ಶೋ 'ಕನ್ನಡ ಕೋಗಿಲೆ'. ಹಾನಗಲ್ ಮೂಲದ ಖಾಸಿಂ ಮೊದಲ ಸ್ಥಾನ ಪಡೆದಿದ್ದಾರೆ ಎನ್ನಲಾಗುತ್ತಿದ್ದು, ತೀರ್ಥಹಳ್ಳಿಯ ಪಾರ್ಥ ಚಿರಂತನ್ ಹಾಗೂ ನೀತು ಸುಬ್ರಹ್ಮಣ್ಯಂ ಎರಡನೇ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ.
ಸಂಗೀತ ಪ್ರಿಯರ ಮನಗೆದ್ದಿರುವ ಕನ್ನಡ ಕೋಗಿಲೆ ರಿಯಾಲಿಟಿ ಶೋ, ಪ್ರೇಕ್ಷಕರಿಗೆ ವೈವಿಧ್ಯಮಯ ಹಾಗೂ ಮನಮೋಹಕ ಹಾಡುಗಳನ್ನು ಉಣಬಡಿಸುತ್ತಿದೆ. ಇಲ್ಲಿ ವಯಸ್ಸಿನ ಮಿತಿ ಇಲ್ಲ. ಎಲ್ಲಾ ವಯಸ್ಸಿನವರಿಗೂ ತಮ್ಮ ಪ್ರತಿಭೆ ಪ್ರದರ್ಶಿಸಲು ಇದೊಂದು ವೇದಿಕೆಯಾಗಿದೆ. ಸಂಗೀತದ ಗುಣಮಟ್ಟದ ವಿಷಯದಲ್ಲಿಯೂ ಒಂದು ಹೆಜ್ಜೆ ಮುಂದಿದ್ದು, ಶೋ ನಡೆಯುವಾಗಲೇ ಇಲ್ಲಿನ ಸ್ಪರ್ಧಿಗಳು ಸಿನಿಮಾ ಹಾಡುಗಳಿಗೆ ದನಿ ನೀಡಿದ್ದಾರೆ.
ಆಗಸ್ಟ್ 3, 4ರಂದು ಕನ್ನಡ ಕೋಗಿಲೆ ರಿಯಾಲಿಟಿ ಶೋ ಫೈನಲ್!
ವಾರದಿಂದ ವಾರಕ್ಕೆ ಬೇರೆ ಬೇರೆ ಸುತ್ತಿನ ಮೂಲಕ ಗಮನ ಸೆಳೆದಿದ್ದ ಕನ್ನಡ ಕೋಗಿಲೆ ಫೈನಲ್ ಹಂತಕ್ಕೆ ತಲುಪಿ ಆಗಿದೆ. ಗ್ರಾಂಡ್ ಫಿನಾಲೆಯಲ್ಲಿ ಮೈಸೂರಿನ ಆಲಾಪ್, ಕೊಪ್ಪಳದ ಏಳು ವರ್ಷದ ಅರ್ಜುನ್ ಇಟಗಿ, ಉಡುಪಿಯ ಕಲಾವತಿ ದಯಾನಂದ್, ಹಾವೇರಿಯ ಖಾಸಿಂ, ಬೆಂಗಳೂರಿನ ನೀತು ಸುಬ್ರಹ್ಮಣ್ಯಂ ಮತ್ತು ಶಿವಮೊಗ್ಗದ ಪಾರ್ಥ ಕನ್ನಡ ಕೋಗಿಲೆ ಕಿರೀಟಕ್ಕಾಗಿ ಸೆಣಸಿದ್ದಾರೆ. ಗ್ರಾಂಡ್ ಫಿನಾಲೆಯಲ್ಲಿ ಸ್ಪರ್ಧಿಗಳ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿತ್ತು ಎನ್ನಲಾಗಿದೆ.
ಈಗಾಗಲೆ ಫೈನಲ್ ರೆಕಾರ್ಡಿಂಗ್ ಮುಗಿದಿದ್ದು, ಕೆಲವು ಮೂಲಗಳ ಪ್ರಕಾರ ಹಾವೇರಿ ಮೂಲದ ಖಾಸಿಂ ಮೊದಲ ಸ್ಥಾನವನ್ನು ಹಾಗೂ ಶಿವಮೊಗ್ಗದ ಪಾರ್ಥ ಚಿರಂತನ್ ಹಾಗೂ ಬೆಂಗಳೂರಿನ ನೀತು ಸುಬ್ರಹ್ಮಣ್ಯಂ ದ್ವಿತೀಯ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ. ಸಾಧು ಕೋಕಿಲ, ಅರ್ಚನಾ ಉಡುಪ ಹಾಗೂ ಚಂದನ್ ಶೆಟ್ಟಿ ತೀರ್ಪುಗಾರರಾಗಿದ್ದರು.