ಕನ್ನಡ ಹಾಡುಗಳ ಜುಗಲ್‌ಬಂದಿಯ ಫೈನಲ್‌ ಹಂತದಲ್ಲಿ ಮೈಸೂರಿನ ಆಲಾಪ್‌, ಕೊಪ್ಪಳದ ಏಳು ವರ್ಷದ ಅರ್ಜುನ್‌ ಇಟಗಿ, ಉಡುಪಿಯ ಕಲಾವತಿ ದಯಾನಂದ್‌, ಹಾವೇರಿಯ ಖಾಸಿಂ, ಬೆಂಗಳೂರಿನ ನೀತು ಸುಬ್ರಹ್ಮಣ್ಯಂ ಮತ್ತು ಶಿವಮೊಗ್ಗದ ಪಾರ್ಥ ಕನ್ನಡ ಕೋಗಿಲೆ ಕಿರೀಟಕ್ಕಾಗಿ ಸೆಣೆಸಲಿದ್ದಾರೆ.

ಆರ್ ಜೆ ಸಿರಿ ಫೋಟೋಗಳು ಸಖತ್ ಹಾಟ್ ಮಗಾ!

ಸಂಗೀತ ಪ್ರಿಯರ ಮನಗೆದ್ದಿರುವ ಕನ್ನಡ ಕೋಗಿಲೆ ರಿಯಾಲಿಟಿ ಶೋ, ಪ್ರೇಕ್ಷಕರಿಗೆ ವೈವಿಧ್ಯಮಯ ಹಾಗೂ ಮನಮೋಹಕ ಹಾಡುಗಳನ್ನು ಉಣಬಡಿಸುತ್ತಿದೆ. ಇಲ್ಲಿ ವಯಸ್ಸಿನ ಮಿತಿ ಇಲ್ಲ. ಸಂಗೀತದ ಗುಣಮಟ್ಟದ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿದ್ದು, ಶೋ ನಡೆಯುವಾಗಲೇ ಇಲ್ಲಿನ ಸ್ಪರ್ಧಿಗಳು ಸಿನಿಮಾ ಹಾಡುಗಳಿಗೆ ದನಿ ನೀಡಿದ್ದಾರೆ.

ಸಂಗೀತ ಕಾರ್ಯಕ್ರಮ ಬೇಕು ಎಂಬ ವೀಕ್ಷಕರ ಬಹುದಿನಗಳ ಬೇಡಿಕೆಯನ್ನು ಕನ್ನಡ ಕೋಗಿಲೆ ಈಡೇರಿಸಿದೆ. ಗುಣಮಟ್ಟದ ಬಗ್ಗೆ ನನಗೆ ಹೆಮ್ಮೆ ಇದೆ. ರಾಜ್ಯದ ನಾನಾ ಭಾಗಗಳಿಂದ ಬೆಳಕಿಗೆ ಬಾರದ ಪ್ರತಿಭೆಗಳನ್ನು ನಮ್ಮ ತಂಡ ಹುಡುಕಿ ತಂದಿದೆ. ಗ್ರ್ಯಾಂಡ್‌ ಫಿನಾಲೆಯಲ್ಲಿ ಇನ್ನಷ್ಟುಮನರಂಜನೆ ಇರಲಿದೆ. - ಪರಮೇಶ್ವರ ಗುಂಡ್ಕಲ್‌

ರಿಯಾಲಿಟಿ ಶೋನ ತೀರ್ಪುಗಾರರಾಗಿ ಸಾಧು ಕೋಕಿಲ, ಅರ್ಚನಾ ಉಡುಪ ಮತ್ತು ಚಂದನ್‌ ಶೆಟ್ಟಿ ಸ್ಪರ್ಧಿಗಳ ಬೆನ್ನುತಟ್ಟುತ್ತಿದ್ದು, ಆರ್‌ಜೆ ಸಿರಿ ನಡೆಸಿಕೊಡುತ್ತಿದ್ದಾರೆ. ಈ ಸೀಸನ್‌ನಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಅಭಿಷೇಕ್‌ ಅಂಬರೀಷ್‌, ರಾಕ್‌ಲೈನ್‌ ವೆಂಕಟೇಶ್‌, ದೊಡ್ಡಣ್ಣ, ಅನೂಪ್‌ ಸೀಳಿನ್‌, ಕವಿ ದೊಡ್ಡರಂಗೇಗೌಡ ಅತಿಥಿಗಳಾಗಿ ಆಗಮಿಸಿ ಸ್ಪರ್ಧಿಗಳನ್ನು ಹುರಿದುಂಬಿಸಿದ್ದಾರೆ. ಗ್ರ್ಯಾಂಡ್‌ ಫೈನಲ್‌ನಲ್ಲಿ ಸಂಗೀತ ಮಾಂತ್ರಿಕ ಗುರುಕಿರಣ್‌ ವಿಶೇಷ ತೀರ್ಪುಗಾರರಾಗಿ ಕಾಣಿಸಲಿದ್ದಾರೆ. ಈ ಆರು ಸ್ಪರ್ಧಿಗಳಲ್ಲಿ ಕನ್ನಡ ಕೋಗಿಲೆ ಸೀಸನ್‌ 2ನ ಕಿರೀಟ ಯಾರ ಮುಡಿಗೇರಲಿದೆ ಎನ್ನುವುದಕ್ಕೆ ಶನಿವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್‌ ಸೂಪರ್‌ ಚಾನೆಲ್‌ನಲ್ಲಿ ಗೊತ್ತಾಗಲಿದೆ.