‘ಸೈರಾ’ ನರಸಿಂಹ ರೆಡ್ಡಿ ಸೆಟ್ ಅಗ್ನಿ ಅವಘಡದಲ್ಲಿ 2 ಕೋಟಿ ವೆಚ್ಚದ ವಸ್ತುಗಳು ಅಗ್ನಿಗೆ ಆಹುತಿಯಾಗಿದ್ದು ಮೂಲಗಳ ಪ್ರಕಾರ ಇದರ ಹಿಂದೆ ‘ಸೈರಾ’ ಚಿತ್ರದ ನಿರ್ದೇಶಕ ಹಾಗೂ ರಾಮ್ ಚರಣ್ ಕೈವಾಡವಿದೆ ಎಂಬ ಮಾತು ಕೇಳಿ ಬರುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೈರಾ ನರಸಿಂಹ ರೆಡ್ಡಿ ಚಿತ್ರೀಕರಣದ ವೇಳೆ ಶೂಟಿಂಗ್ ಸೆಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಪ್ರಕರಣದಲ್ಲಿ 2 ಕೋಟಿಗೂ ಹೆಚ್ಚು ಆಸ್ತಿ ನಷ್ಟವಾಗಿದೆ.

‘ಸೈರಾ‘ ವೊಂದು ಐತಿಹಾಸಿಕ ಚಿತ್ರವಾದ ಕಾರಣ ಇದಕ್ಕೆ ಭರ್ಜರಿ ಸೆಟ್ ಗಳನ್ನು ಚಿರು ಫಾರ್ಮ್ ಹೌಸ್ ನಲ್ಲಿ ನಿರ್ಮಿಸಲಾಗಿತ್ತು.

10 ವರ್ಷಗಳ ನಂತರ ಟಾಲಿವುಡ್ ನಲ್ಲಿ ಒಂದಾದ ಬಾಲಿವುಡ್ - ಸ್ಯಾಂಡಲ್ ವುಡ್ ಬಚ್ಚನ್!

ಅವಘಡ ಆದ ಮೊದಲೆರೆಡು ದಿನಗಳಲ್ಲಿ ಇದು ಆಕಸ್ಮಿಕವಾದ ಘಟನೆ ಎಂದು ಹೇಳಲಾಗಿತ್ತು. ಆದರೆ ಇದರಲ್ಲಿ ರಾಮ್ ಚರಣ್ ತೇಜ ಅವರ ಕೈವಾಡವಿದ್ದು ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಕೆಲ ದಿನಗಳ ಹಿಂದೆ ವಿಮೆಯ ವಿಚಾರವಾಗಿ ಚರ್ಚೆ ನಡೆದಿತ್ತು. ಈ ಕಾರಣಕ್ಕಾಗಿ ವಿಮೆ ಹಣ ಪಡೆಯಲು ಸೆಟ್ ನಲ್ಲಿ ಬೆಂಕಿ ಇಡಲಾಗಿದೆ ಎಂದು ಹೇಳಲಾಗುತ್ತದೆ.