ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ರನ್ನು ಬಚ್ಚನ್ ಎಂದೇ ಕರೆಯುತ್ತಾರೆ. ಈ ಹಿಂದೆ ಅಮಿತಾಭ್ ಹಾಗೂ ಕಿಚ್ಚ, ರಣ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಈಗ ಸೈರಾದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ.

‘10 ವರ್ಷಗಳ ಹಿಂದೆ ರಣ್, ಈಗ ಮತ್ತೊಮ್ಮೆ ಲೆಜೆಂಡ್ ನಟನೊಂದಿಗೆ ಅವಕಾಶ ಸಿಕ್ಕಿದೆ. ಥ್ಯಾಂಕ್ಸ್ ಸೈರಾ ಚಿತ್ರತಂಡಕ್ಕೆ. ರಾಮ್ ಚರಣ್ ಹಾಗೂ ನಿರ್ದೇಶಕ ಸುರೇಂದರ್ ಇಂತಹ ಅಮೂಲ್ಯ ಕ್ಷಣವನ್ನು ಗಿಫ್ಟ್ ಮಾಡಿದ್ದಕ್ಕೆ ಧನ್ಯವಾದ’ ಎಂದು ಟ್ಟೀಟ್ ಮಾಡಿದ್ದಾರೆ.

 

ಸೈರಾ ಚಿತ್ರವು ಮೆಗಾಸ್ಟಾರ್ ಚಿರಂಜೀವಿ ಅಭಿನಯದ 151ನೇ ಸಿನಿಮಾವಾಗಿದ್ದು ಇದನ್ನು ಸುರೇಂದರ್ ನಿರ್ದೇಶನ ಮಾಡುತ್ತಿದ್ದಾರೆ.