ನಾನು ಸ್ಪಂದಿಸುತ್ತೇನೆ, ಶೀಘ್ರದಲ್ಲೇ ಮೀಟಿಂಗ್ ಕರೆಯುತ್ತೇನೆ, ಕಲಾವಿದರನ್ನೆಲ್ಲ ಕರೆಯುತ್ತೇನೆ.. ಅವರವರು ಅವರವರ ಹೇಳಿಕೆ ಕೊಡಬಹುದು.. ಹೇಗೆ ಇದಕ್ಕೆ ಸ್ಪಂದಿಸಬೇಕು ಅನ್ನೋದನ್ನ ಕೇಳ್ತೀನಿ.. ನಮ್ಮ ಮನೆಯಲ್ಲಿ ಹತ್ತಿರೋ ಬೆಂಕಿನ ನಾವು ಆರಿಸಿಕೊಳ್ಳೋಕೆ ಪ್ರಯತ್ನ ಪಡ್ತೀವಿ.. ಸರ್ಕಾರ ಸ್ಪಂದಿಸುತ್ತೆ..
ರಮ್ಯಾ (Ramya) ಹಾಗೂ ನಟ ದರ್ಶನ್ (Darshan Thoogudeepa) ಅಭಿಮಾನಿಗಳ ನಡುವಿನ ಸೋಷಿಯಲ್ ಮೀಡಿಯಾ ಜಟಾಪಟಿ ಬಗ್ಗೆ ಇದೀಗ ನಟ-ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ (Rockline Venkatesh) ಮಾತನ್ನಾಡಿದ್ದಾರೆ. ಹಾಗಿದ್ದರೆ ಅವರು ಹೇಳಿದ್ದೇನು? ಇಲ್ಲಿದೆ ನೋಡಿ ಮಾಹಿತಿ.. ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಕಲಾವಿದರ ಸಂಘಕ್ಕೆ ಮನವಿ ಕೊಟ್ಟಿದಾರೆ. ಆ ಬಳಿಕ ಮಾತನ್ನಾಡಿರುವ ರಾಕ್‌ಲೈನ್ ವೆಂಕಟೇಶ್ ಅವರು 'ಘಟನೆ ಉದ್ಭವ ಮಾಡಿದವರು ಹಾಗೂ ಮುಂದುವರೆಸಿಕೊಂಡು ಹೋಗೋವ್ರಿಗೆ ಶಿಕ್ಷೆ ಆಗಬೇಕು' ಎಂದಿದ್ದಾರೆ.
ಅಷ್ಟೇ ಅಲ್ಲ, 'ಎದುರು ನಿಂತು ಮಾತನಾಡೋವ್ರನ್ನು ಎದುರಿಸಬಹುದು.. ಎಲ್ಲೋನಿಂತು ಮಾತಾಡೋವ್ರನ್ನ ಹೇಗೆ ಸಹಿಸಿ ಕೊಳ್ಳೋದು? ಯಾರೇ ಹೀರೋ ಆಗಿದ್ರೂ ಅವರ ಅಭಿಮಾನಿ ನಿಜಕ್ಕೂ ಹೀಗ್ ಮಾಡಿದ್ದೇ ಆಗಿದ್ರೆ ತಪ್ಪು.. ರಮ್ಯಾ ಅವರ ವಿಷಯದಲ್ಲಿ ಯಾರೇ ಆಗಿದ್ರೂ ನಿಜವಾದ ಫ್ಯಾನ್ಸ್ ಫಾಲೋ ಪೇಜ್‌ನಿಂದ ಬಂದಿದೆ ಅಂದ್ರೆ ಅವ್ರು ಯಾರೇ ಆಗಿದ್ರೂ ಶಿಕ್ಷೆ ಆಗಬೇಕು. ಎಲ್ಲರೂ ನಿಮ್ಮ ಮನೆ ಹೆಣ್ಣು ಮಕ್ಕಳನ್ನ ತೃಪ್ತಿ ಸಂತೋಷವಾಗಿಟ್ಟುಕೊಳ್ಳಿ..
ಯಾರ ಸ್ಟಾರ್ ನಟರೂ ಬಂದು ಕಾಪಾಡೋಲ್ಲ ನಿಮ್ಮನಿಮ್ಮ ಮನೆಯ ಮಹಿಳೆಯರನ್ನು ಕಾಪಾಡಲ್ಲ. ಗಾಳಿಲಿ ಗುಂಡು ಹೊಡೆಯೋರನ್ನ ಕೇರ್ ಮಾಡಲ್ಲ ನಾನು. ಹೀರೋ ಸಪೋರ್ಟ್ ಮಾಡ್ಕೊಂಡು ನಿಲ್ಲೋದಾದ್ರೆ ಎದುರು ಬಂದು ನಿಲ್ಲೋದು ಗಂಡಸ್ತನ. ನಾನೇ ರಮ್ಯಾಗೆ ಹೇಳ್ತೀನಿ, ಈ ಹುಡುಗ ಹೀಗ್ ಮಾಡಿದಾನೆ ಅಂದ್ರೆ ಪಾಠ ಕಲಿಸಿ ಅಂತ..
ಹೀಗಾಗಿದ್ದಕ್ಕೆ ಸಿನಿಮಾ ಮಾಡೋಕೆ ಭಯ ಆಗ್ತಿದೆ.. ರಾಜ್ ಕುಮಾರ್ , ಅಂಬರೀಶ್ , ವಿಷ್ಣುವರ್ಧನ್ ಚಿತ್ರರಂಗ ಕಟ್ಟಿಕೊಟ್ರು.. ಆದರೆ ಅವರು ಕಟ್ಟಿಕೊಟ್ಟ ವೇದಿಕೆಯನ್ನು ನಾವು ಹೇಗೆ ಯೂಸ್ ಮಾಡಿಕೊಳ್ತಿದ್ದೀವಿ? 200 ಇರೋ ಸಿನಿಮಾ 30 ಕ್ಕೆ ಬರುತ್ತೆ.. ಫಾನ್ಸ್‌ಗೆ ರಿಕ್ವೆಸ್ಟ್ ಮಾಡ್ಕೋತೀನಿ, ಈ ಧೋರಣೆ ಇರಬಾರದು.. ಆಗಿರೋ ತಪ್ಪನ್ನ ಸರಿಪಡಿಸಿಕೊಂಡು ನೀವೇ ಬನ್ನಿ.. ನಿಮ್ಮ ಸ್ವಾರ್ಥಕ್ಕೆ ಚಿತ್ರರಂಗವನ್ನು ಬಲಿ ಕೊಡಬೇಡಿ.. ಯಾರೋ ಎಂಟತ್ತು ಜನ ಹೊಟ್ಟೆ ತಂಬಿದವರ ಬಗ್ಗೆ ನೀವು ಮಾತಾಡಿದ್ರೆ ಇನ್ನುಳಿದ ಸಾವಿರಾರು ಜನ ಏನ್ಮಾಡ್ಬೇಕು?
ಇವೆಲ್ಲವನ್ನೂ ಇಲ್ಲಿಗೆ ನಿಲ್ಲಿಸಿ.. ಇದಕ್ಕೆ ಸಂಬಂಧಪಟ್ಟ ಕಲಾವಿದ ಆಗಲಿ ಅಥವಾ ಸಂಬಂಧಪಟ್ಟವರು ಯಾರೇ ಆಗಿದ್ದರೂ ಇಂಥದ್ದನ್ನೆಲ್ಲಾ ತಕ್ಷಣ ನಿಲ್ಲಿಸಿ.. ಎಲ್ಲರೂ ಸೇರಿಕೊಂಡು ಸಿನಿಮಾ ಮಾಡಬೇಕು ಅನ್ನೋ ಮನೋಭಾವ ಬರಬೇಕು. ಹಿರಿಯರು ಕಷ್ಟಪಟ್ಟು ಚಿತ್ರರಂಗ ಕಟ್ಟಿದಾರೆ, ಚಿತ್ರರಂಗಕ್ಕೆ ನಮ್ಮಕೊಡುಗೆ ಏನು ? ಸ್ವಾರ್ಥ ಆಗಬಾರದಲ್ಲ..!
ಯಾವುದೇ ಒಂದು ಸಿನಿಮಾ ರಿಲೀಸ್ ಆಗಾದ ಎಷ್ಟೊಂದು ಪರ ವಿರೋಧ ಬರುತ್ತೆ..ಈ ಥರ ಸಿಚುವೇಷನ್ ಬಂದಾಗ ಈ ಥರ ಧೋರಣೆ ಮಾಡಬಾರದು ಅನ್ನೋದಷ್ಟೇ ನನ್ನ ಮನಸ್ಸಿಗೆ ಬರೋದು.. ನಾವು ಕ್ಯಾಮೆರಾ ಮುಂದೆ ಜನಗಳಿಗೆ ಬುದ್ಧಿ ಹೇಳೋದನ್ನ ರಿಯಲ್ ಲೈಫ್ ನಲ್ಲಿ ಫಾಲೋ ಮಾಡಿದ್ರೆ ಎಷ್ಟೋ ಚೆನ್ನಾಗಿರುತ್ತೆ.. ಅಭಿಮಾನಿಗಳಿಗೆ ಹೇಳಿ ತಿಳಿ ಪಡಿಸಬೇಕು, ನನ್ನ ಹೆಸರು ಇಟ್ಕೊಂಡು ಮಾಡೋಕೆ ಹೋಗಬಾರದು.. ದರ್ಶನ್ ಆಗಲಿ ಸುದೀಪ್ ಆಗಲಿ ಯಾವುದೇ ಸೂಪರ್ ಸ್ಟಾರ್ ಆಗಲಿ ಮುಂದೆ ಬರಬೇಕು..
ನಾನು ಸ್ಪಂದಿಸುತ್ತೇನೆ, ಶೀಘ್ರದಲ್ಲೇ ಮೀಟಿಂಗ್ ಕರೆಯುತ್ತೇನೆ, ಕಲಾವಿದರನ್ನೆಲ್ಲ ಕರೆಯುತ್ತೇನೆ.. ಅವರವರು ಅವರವರ ಹೇಳಿಕೆ ಕೊಡಬಹುದು.. ಹೇಗೆ ಇದಕ್ಕೆ ಸ್ಪಂದಿಸಬೇಕು ಅನ್ನೋದನ್ನ ಕೇಳ್ತೀನಿ.. ನಮ್ಮ ಮನೆಯಲ್ಲಿ ಹತ್ತಿರೋ ಬೆಂಕಿನ ನಾವು ಆರಿಸಿಕೊಳ್ಳೋಕೆ ಪ್ರಯತ್ನ ಪಡ್ತೀವಿ.. ಸರ್ಕಾರ ಸ್ಪಂದಿಸುತ್ತೆ ಅನ್ನೋ ನಂಬಿಕೆ ಸಹ ಇದೆ.. ನೀವೇ ಬಗೆಹರಿಸಿಕೊಳ್ಳಿ ಎಂದರೆ ಬಗೆಹರಿಸಿಕೊಳ್ತೀವಿ' ಎಂದಿದ್ದಾರೆ.
ಜೊತೆಗೆ, 'ನನಗೇ ಟ್ರೋಲ್ ಮಾಡಿದ್ರು.. ಕೆಟ್ಟದಾಗಿ ಬೈದ್ರು.. ಇದಕ್ಕೆ ಪ್ರೂಫ್ ಇದೆ ಅಂತ ಗೊತ್ತಾಗಿ ಲೀಗಲ್ ಆಗಿ ಕೇಸ್ ಹಾಕಿದೀನಿ.. ಎಂಟತ್ತು ಕೇಸ್ ಹಾಕಿದೀನಿ.. ಅವರು ಇನ್ನು ಹಲವು ವರ್ಷ ಆಗಾಗ 'ಕೋರ್ಟ್'ಗೆ ಅಲಿಬೇಕು.. ಸಮಯ ಬಂದಾಗ ಹೇಳ್ತೀನಿ, ಯಾಕೆ ಹೊಡೀಲಿ ಬಡೀಲಿ ಲೀಗಲಿ ಆಕ್ಷನ್ ತಗೋತಿನಿ ಅಂತ.. ಕೆಲವರು ಬಂದ್ರು, ಅವರಿಗೆ ಹೇಳ್ದೆ ಕೋರ್ಟ್ ನಲ್ಲೇ ನೋಡ್ಕೊಳ್ಳಿ ಅಂತ.. ಆವಾಗ ಯಾವ್ ಸ್ಟಾರ್ ಕೈಹಿಡಿತಾರೆ ಅಂತ ಗೊತ್ತಾಗುತ್ತೆ, ಗೊತ್ತಾಗಬೇಕು.. ಅಮ್ಮ ಅಕ್ಕ ಎಲ್ಲ ದೇವರು, ಬಯ್ಯೋವ್ನಿಗೆ ಅವರೂ ಕೇಸ್ ಹಾಕಿದಾರೆ.. ಲೈಫ್ ಲಾಂಗ್ ಅವರು ಕೋರ್ಟ್‌ಗೆ ಅಲೀಬೇಕು..' ಎಂದಿದ್ದಾರೆ ರಾಕ್‌ಲೈನ್ ವೆಂಕಟೇಶ್.
