ಬೆಂಗಳೂರು (ಸೆ. 19): ರಾಕಿಂಗ್ ಸ್ಟಾರ್ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಬಿಡುಗಡೆಗೆ ಸಿದ್ಧವಾಗಿದೆ. ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.  ಕನ್ನಡ ಚಿತ್ರವೊಂದು ಪಂಚಭಾಷೆಗಳಲ್ಲಿ ರಿಲೀಸ್ ಆಗುವ ಹೆಮ್ಮೆ ಈ ಚಿತ್ರದ್ದು. 

ಚಿತ್ರ ಬಿಡುಗಡೆ ಸಂಬಂಧ ಇದ್ದ ಎಲ್ಲ ಅನುಮಾನಗಳಿಗೆ ಹೊಸ ಪೋಸ್ಟರ್ ತೆರೆ ಎಳೆದಿದೆ. ಚಿತ್ರದ ಟ್ರೈಲರ್‌ ಅಕ್ಟೋಬರ್ 14ಕ್ಕೆ ರಿಲೀಸ್ ಆದರೆ ಚಿತ್ರ ನವೆಂಬರ್ 16ಕ್ಕೆ ರಿಲೀಸ್ ಆಗುವುದು ಪಕ್ಕಾ ಆಗಿದೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಈ ಲಿಕ್ ಸಖತ್ ವೈರಲ್ ಆಗ್ತಿದೆ.