ಸ್ಯಾಂಡಲ್‌ವುಡ್ ಮಾತ್ರ ಅಲ್ಲದೇ ಇಡೀ ದಕ್ಷಿಣ ಭಾರತದಲ್ಲಿ ಹೊಸ ಕ್ರೇಜ್ ಹುಟ್ಟಿಸಿರುವ  ಕೆಜಿಎಫ್‌ನ ಹಾಡಿನ ಸಾಹಿತ್ಯವೊಂದನ್ನು ಯುಟ್ಯೂಬ್‌ನಲ್ಲಿ ಮಂಗಳವಾರ ಸಂಜೆ ಬಿಡುಗಡೆ ಮಾಡಲಾಗಿದೆ. ಯಶ್‌ಗೆ ಅಭಿಮಾನಿಗಳು ಸಲಾಂ ಹಾಕುತ್ತಿದ್ದಾರೆ.

ಬಿಡುಗಡೆಯಾಗಿದ್ದ ಟ್ರೈಲರ್‌ನ್ನು ಕಿಚ್ಚ ಸುದೀಪ್ ಸೇರಿದಂತೆ  ಚಿತ್ರರಂಗದ ದಿಗ್ಗಜರು ಕೊಂಡಾಡಿದ್ದರು.  ಮಾಸ್ ಹಾಡಿನಿಂದಲೇ ಪ್ರಸಿದ್ಧರಾಗಿರುವ ರವಿ ಬಸ್ರೂರು ಸಂಗೀತಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರೆಬಲ್ ಸ್ಟಾರ್ ಅಂಬರೀಶ್‌ ಯಶ್‌ಗೆ ದಮ್ಮಯ್ಯ ಅಂದಿದ್ರಂತೆ! ಯಾಕೆ..

ಇದು ಟೈಟಲ್ ಸಾಂಗ್ ಆಗಿರತ್ತೋ, ಇಡೀ ಚಿತ್ರದಲ್ಲಿ ಮತ್ತೆ ಮತ್ತೆ ಬರುತ್ತಿರುತ್ತದೆಯೋ ಎಂಬ ಸಂಗತಿ ಗೊತ್ತಿಲ್ಲ. ಆದರೆ ಸದ್ಯಕ್ಕೆ ಸೋಶಿಯಲ್ ಮೀಡಿಯಾ ಮತ್ತು ಯು ಟ್ಯೂಬ್‌ನಲ್ಲಿ ಕೆಜಿಎಫ್‌ ಹವಾ ಮತ್ತಷ್ಟು ಜೋರಾಗಿದೆ.