ರಜಿನಿಕಾಂತ್ ರೋಬೋ 2.0ದಲ್ಲಿ ಮೂರು ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚೆನ್ನೈ(ನ.03): ಕಬಾಲಿಯಾಗಿ ತೆರೆಯ ಮೇಲೆ ಅಬ್ಬರಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಸಿನಿಮಾದಲ್ಲಿ ಮತ್ತೊಮ್ಮೆ ಅಭಿಮಾನಿಗಳ ರಂಜಿಸಲು ಬರುತ್ತಿದ್ದಾರೆ. 

ರಜಿನಿಕಾಂತ್ ರೋಬೋ 2.0ದಲ್ಲಿ ಮೂರು ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಬೋ ಮೊದಲ ಆವೃತ್ತಿಯಲ್ಲಿ ವಸೀಗರನ್ , ಚಿಟ್ಟಿ ಪಾತ್ರಗಳಲ್ಲಿ ರಜನಿ ಅಭಿನಯಿಸಿದ್ದು ಮುಂದುವರಿದ ಭಾಗದಲ್ಲಿ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರಂತೆ. 

ಈ ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಖಳ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷತೆ ಎನ್ನಲಾಗಿದ್ದು, ರೋಬೋ ಚಿತ್ರದಲ್ಲಿ ರಜಿನಿಯನ್ನು ವಿಭಿನ್ನವಾಗಿ ನೋಡಿದ ರಜನಿ ಅಭಿಮಾನಿಗಳಲ್ಲಿ ಈ ಚಿತ್ರ ಸಾಕಷ್ಟು ಕೂತುಹಲವನ್ನು ಕೆರಳಿಸಿದೆ.