ನಾನು ಸದ್ಯಕ್ಕೆ ನಿರೀಕ್ಷೆಯಿಂದ ಎದುರು ನೋಡುತ್ತಿರುವುದು ಬಾಹುಬಲಿ-2 ಚಿತ್ರವನ್ನು’ ಎಂದು ಶೇ
ಬಾಹುಬಲಿ ಪ್ರಭಾಸ್ ಮುಂದೆ ರೋಬೋ ಸ್ಟಾರ್ ರಜನಿಕಾಂತ್ ಸೋತಿದ್ದಾರೆ! ಅಚ್ಚರಿಯಾದರೂ ಇದು ನಂಬುವ ವಿಷಯ ಅನ್ನುತ್ತದೆ ಪ್ರತಿಷ್ಠಿತ ಒಂದು ಸರ್ವೆ ಸಂಸ್ಥೆ. ಆದರೂ ಸೂಪರ್ ಸ್ಟಾರ್ ರಜನಿಕಾಂತ್ ಅಂದರೆ ಕೇವಲ ಭಾರತೀಯ ಸಿನಿಮಾ ಅಭಿಮಾನಿಗಳಿಗೆ ಮಾತ್ರವಲ್ಲ, ವಿದೇಶಗಳಲ್ಲೂ ಅವರ ಅಭಿಮಾನಿಗಳ ದಂಡು ಇದೆ. ಹೊರ ದೇಶಗಳಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಇಟ್ಟುಕೊಂಡಿರುವ ಇಂಡಿಯನ್ ನಟ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಆದರೆ, ಈಗ್ಯಾಕೆ ರಜನಿ ಕುರಿತ ಈ ಪೀಠಿಕೆ? ಎನ್ನುವ ಗುಮಾನಿ ಇದ್ದವರು ಈ ಸುದ್ದಿ ನೋಡಿ.
ಒರ್ಮಾಕ್ಸ್ ಮೀಡಿಯಾ ಸಂಸ್ಥೆ ಇತ್ತೀಚೆಗಷ್ಟೆ ಒಂದು ಸಮೀಕ್ಷೆ ಮಾಡಿದೆ. ಸದ್ಯ ಭಾರತೀಯ ಸಿನಿಮಾ ಪ್ರೇಕ್ಷಕರು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ಸಿನಿಮಾ ಯಾವುದು? ಎಂಬುದು ಈ ಸಮೀಕ್ಷೆಯ ಮುಖ್ಯ ಪ್ರಶ್ನೆ. ಈ ಸಂಸ್ಥೆ ದೇಶದ ವಿವಿಧ ರಾಜ್ಯಗಳಿಗೆ ತೆರಳಿ ಅಭಿಪ್ರಾಯ ಸಂಗ್ರಹಿಸಿದೆ. ‘ನಾನು ಸದ್ಯಕ್ಕೆ ನಿರೀಕ್ಷೆಯಿಂದ ಎದುರು ನೋಡುತ್ತಿರುವುದು ಬಾಹುಬಲಿ-2 ಚಿತ್ರವನ್ನು’ ಎಂದು ಶೇ.51ರಷ್ಟು ಅಭಿಪ್ರಾಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹೀಗೆ ಜನಾಭಿಪ್ರಾಯ ಸಂಗ್ರಹ ಮಾಡಿದ ಸಂಸ್ಥೆಗೆ ಶಾಕ್ ಕೊಟ್ಟಿರುವುದು ‘ರೋಬೋ. 2’ ಸಿನಿಮಾ ಟಾಪ್ 3 ಸ್ಥಾನದಲ್ಲೂ ಬಂದಿಲ್ಲ.
‘ಬಾಹುಬಲಿ.2’ ಚಿತ್ರದ ನಂತರ ಶಾರುಖ್ ಖಾನ್, ಸನ್ಮಾನ್ ಖಾನ್ ಚಿತ್ರಗಳ ಮೇಲೆ ಅಸಕ್ತಿ ತೋರಿಸಿದ್ದಾರೆ. ಹೀಗಾಗಿ ಸಂಸ್ಥೆ ಸಮೀಕ್ಷೆಗೆ ಒಳಪಡಿಸಿದವರ ಪೈಕಿ ಶೇ.51 ಭಾಗ ‘ಬಾಹುಬಲಿ-2’ ಚಿತ್ರಕ್ಕೆ, ಶಾರುಖ್ ಖಾನ್‌ರ ‘ರಾಯಿಸ್’ಗೆ ಶೇ.21, ಸನ್ಮಾನ್ ಖಾನ್‌ರ ‘ಟ್ಯೂಬ್ ಲೈಟ್’ ಚಿತ್ರಕ್ಕೆ ಶೇ.6 ಮತಗಳನ್ನು ದಕ್ಕಿಸಿಕೊಂಡರೆ, ರಜನಿಕಾಂತ್ ಅವರ ‘ರೋಬೋ. 2’ ಸಿನಿಮಾ ಕೇವಲ ಶೇ.2ರಷ್ಟು ಮತಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನದಲ್ಲೂ ನಿಲ್ಲದೆ ಹೋಗಿರುವುದು ಅಚ್ಚರಿ. ವಿಶೇಷ ಅಂದರೆ ಅಜಯ್ ದೇವಗಾನ್ ಅವರ ‘ಗೋಲ್‌ಮಾಲ್-3’ ಸಿನಿಮಾ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ. ಒಟ್ಟಿನಲ್ಲಿ ಸೌತ್ ಇಂಡಿಯನ್ ಸಿನಿಮಾವೊಂದು ನಾರ್ತ್ ಇಂಡಿಯನ್ ಚಿತ್ರೋದ್ಯಮವನ್ನು ಮೀರಿ ನಿಂತಿರುವ ಜತೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರಂಥ ಚಿತ್ರವನ್ನೇ ಹಿಂದಿಕ್ಕಿದೆ. ಅದು ‘ಬಾಹುಬಲಿ’ಯ ತಾಕತ್ತು ಎಂದು ಎದೆ ತಟ್ಟಿಕೊಳ್ಳುತ್ತಿದ್ದಾರೆ ತೆಲುಗು ಸಿನಿಮಾ ಪ್ರಿಯರು. ‘ರೋಬೋ.2’ ಸಿನಿಮಾ ‘ಬಾಹುಬಲಿ. 2’ಗೆ ಎದುರಾಗಿ ಸ್ಪರ್ಧೆ ನೀಡುತ್ತದೆಂಬ ಚಿಂತೆಯಲ್ಲಿದ್ದ ನಿರ್ದೇಶಕ ರಾಜಮೌಳಿಗೆ ಈ ಸಮೀಕ್ಷೆ ಸಿಕ್ಕಾ ಪಟ್ಟೆ ಖುಷಿ ಕೊಟ್ಟಿದೆಯಂತೆ.
