ನವದೆಹಲಿ[ಜೂ.30]: ಸ್ಟೈಲಿಷ್‌ ಆಗಿರುವ ಶೂ ಹಾಕಬೇಕೆಂಬ ಮನಸ್ಸುಳ್ಳವರು ಅದಕ್ಕಾಗಿ ಹೋದಲೆಲ್ಲಾ ಶೋಧಿಸುತ್ತಾರೆ. ಅದೇ ರೀತಿ ಬಾಲಿವುಡ್‌ ನಟ ರಿಷಿ ಕಪೂರ್‌ ಅವರು ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಬರೋಬ್ಬರಿ 27 ಲಕ್ಷ ರುಪಾಯಿ ಮೌಲ್ಯದ ಸ್ಟೈಲಿಶ್‌ ಶೂ ಕಂಡು ಆಶ್ಚರ್ಯಗೊಂಡಿದ್ದಾಗಿ ಹೇಳಿಕೊಂಡಿದ್ದಾರೆ. 

ರಿಷಿ ಕಪೂರ್‌ ಬಹುತೇಕ ಕ್ಯಾನ್ಸರ್‌ ಮುಕ್ತ

ಈ ಬಗ್ಗೆ ಟ್ವೀಟ್‌ ಮಾಡಿರುವ ನಟ ರಿಷಿ ಕಪೂರ್‌ ಅವರು, ಇತ್ತೀಚೆಗೆ ನ್ಯೂಯಾರ್ಕ್‌ನ  ಶೂ ಅಂಗಡಿಯೊಂದರಲ್ಲಿ ಬಣ್ಣ-ಬಣ್ಣದ ಮತ್ತು ವಿವಿಧ ರೀತಿಯ ಶೂಗಳನ್ನು ನೋಡಿದೆ. ಅವುಗಳ ಬೆಲೆ 5000 ಡಾಲರ್‌(3 ಲಕ್ಷ ರು.)ನಿಂದ ಹಿಡಿದು 40,000 ಡಾಲರ್‌(27 ಲಕ್ಷ ರು.)ವರೆಗೂ ಇದೆ’ ಎಂದು ಹೇಳಿದ್ದಾರೆ. 

ಅಲ್ಲದೆ, ಈ ಶೂ ಮಳಿಗೆಯಲ್ಲಿ 12 ಸಾವಿರ ರೀತಿಯ ಶೂಗಳಿದ್ದು, ಅತಿದೊಡ್ಡ ಶೂ ಮಳಿಗೆಯಾಗಿದೆ ಎಂದಿದ್ದಾರೆ. ಇದರ ಜೊತೆಗೆ, ಶೂ ಮಳಿಗೆಯಲ್ಲಿರುವ ಶೂಗಳ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.