ಬಾಲಿವುಡ್ ಭಾಯಿಜನ್ ಸಲ್ಲು ಭಾಯ್ ಹಾಗೂ ನಟಿ ಕತ್ರಿನಾ ಕೈಫ್ ನಡುವೆ ಕುಚ್ ಕುಚ್  ಹೋ ಗಯಾ ಆಗಿ ಅದು ಕಭಿ ಅಲ್ವಿದಾ ನಾ ಕೆಹನಾ ಎಂಬಲ್ಲಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದರು.

ಬ್ರೇಕಪ್ ಆಗಿದ್ದರೇನಂತೆ ಅದು ಪರ್ಸನಲ್ ಲೈಫ್ ಎಂದು ಇಬ್ಬರೂ ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ.  ಟೈಗರ್ ಜಿಂದಾ ಹೈ, ಏಕ್ ಥಾ ಟೈಗರ್, ಮೈನೆ ಪ್ಯಾರ್ ಕ್ಯೂ ಕಿಯಾ ಹಾಗೂ ಯುವರಾಜ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆಗಾಗ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಲ್ಲುಭಾಯ್ ಗೆ ಆಪ್ತವಾಗಿರುವವರಲ್ಲಿ ಕತ್ರಿನಾ ಕೂಡಾ ಒಬ್ಬರು. 

ಕತ್ರಿನಾ ಮಂಗಳವಾರ ಅಂದರೆ ಜುಲೈ 16 ರಂದು ಮೆಕ್ಸಿಕೋದಲ್ಲಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಕತ್ರಿನಾ ಕೈಫ್ ಗೆ ‘ ಹ್ಯಾಪಿ ಬರ್ತಡೇ ಕತ್ರಿನಾ’ ಎಂದು ಸಲ್ಲುಭಾಯ್ ವಿಶ್ ಮಾಡಿದ್ದಾರೆ.

 

ಇಬ್ಬರೂ ಒಟ್ಟಿಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.  

ಸಲ್ಮಾನ್ ಖಾನ್ ‘ದಬಾಂಗ್ -3’ ಸಿನಿಮಾದಲ್ಲಿ ಬ್ಯುಸಿಯಾಗಿದ್ರೆ ಕತ್ರಿನಾ ‘ಸೂರ್ಯವಂಶಿ’ ಸಿನಿಮಾದಲ್ಲಿ ನಟಿಸಿದ್ದಾರೆ.