‘ಸಹಿಪ್ರಾ ಶಾಲೆ ಕಾಸರಗೋಡು’ ಚಿತ್ರದ ಶತದಿನೋತ್ಸವ ಸಂಭ್ರಮದಲ್ಲಿರುವ ರಿಷಬ್ ಶೆಟ್ಟಿ ಇನ್ನು ಕೆಲವೇ ದಿನಗಳಲ್ಲಿ ‘ನಾಥೂರಾವ’ ಆಗಿ ಬದಲಾಗಲಿದ್ದಾರೆ.

ಕಿರುತೆರೆಯ ಸ್ಟಾರ್ ನಿರ್ದೇಶಕ ವಿನು ಬಳಂಜ ಇದೇ ಮೊದಲಬಾರಿಗೆ ನಿರ್ದೇಶಿಸುತ್ತಿರುವ ಸಿನಿಮಾ ಇದು. ಈ ಚಿತ್ರದ ಚಿತ್ರೀಕರಣ ಡಿಸೆಂಬರ್ನಲ್ಲಿ ಆರಂಭವಾಗಲಿದೆ. ‘ಬೆಲ್ ಬಾಟಂ’ ಚಿತ್ರೀಕರಣ ಮುಗಿಸಿರುವ
ರಿಷಬ್ ‘ನಾಥೂರಾವ’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.‘ರಂಗಿತರಂಗ’ ಖ್ಯಾತಿಯ ಎಚ್‌ಕೆ ಪ್ರಕಾಶ ಚಿತ್ರದ ನಿರ್ಮಾಪಕ.

ಈಗಾಗಲೇ ರಿಷಬ್ ನಿಧಾನವಾಗಿ ನಾಥೂರಾವ ಪಾತ್ರವನ್ನು ತಮ್ಮೊಳಗೆ ಆವಾಹಿಸುತ್ತಿದ್ದಾರೆ. ಶತದಿನೋತ್ಸವ ಸಂಭ್ರಮದ ಬಳಿಕ ಹೊಸ ಚಿತ್ರದ ಚಿತ್ರೀಕರಣ ಪ್ರಕ್ರಿಯೆ ಪ್ರಾರಂಭವಾಗಲಿದೆ.