ಬೆಂಗಳೂರು (ಫೆ. 18): ಬುದ್ಧಿಜೀವಿಗಳನ್ನು ನಾನ್ ಸೆನ್ಸ್ ಮಾತಾಡ್ತಿದ್ದಾರೆ. ಅವರನ್ನು ದೇಶಬಿಟ್ಟು ಓಡಿಸಬೇಕು ಆಗ ದೇಶ ಚೆನ್ನಾಗಿರುತ್ತದೆ ’ ಎಂದು ರಿಷಬ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹುತಾತ್ಮ ಯೋಧ ಗುರು ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಬುದ್ಧಿ ಜೀವಿಗಳಿಗೆ ತಿವಿದಿದ್ದಾರೆ. ಬುದ್ಧಿಜೀವಿಗಳು ಮಾತುಕತೆ ಬಗ್ಗೆ ಮಾತನಾಡುತ್ತಿದ್ದಾರೆ. ನಾನ್ ಸೆನ್ಸ್ ಆಗಿ ಮಾತನಾಡುತ್ತಿದ್ದಾರೆ. ಇವರನ್ನು ದೇಶದಿಂದ ಓಡಿಸಿದ್ರೆ ದೇಶ ಚೆನ್ನಾಗಿರುತ್ತದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. 

ಕೆಲವರು ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುತ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕುತ್ತಾರೆ. ಇವರಿಗೆ ಹುಚ್ಚು ಹಿಡಿದಿದೆ. ಈ ರೀತಿ ಕೂಗಿದ್ರೆ ಗುರುತಿಸಿಕೊಳ್ಳಬಹುದು ಎಂದುಕೊಂಡಿದ್ದಾರೆ. ಅವರನ್ನು ಮಟ್ಟ ಹಾಕಬೇಕು ಎಂದು ವಾಗ್ದಾಳಿ ನಡೆಸಿದರು. 

ರಿಷಬ್ ಶೆಟ್ಟಿಯವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.