ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಹಿತ ಸಂಪೂರ್ಣ ಕಿರಿಕ್ ತಂಡ ಮದುವೆಯಲ್ಲಿ ಹಾಜರಿತ್ತು.
ಈ ವರ್ಷದ ಸೂಪರ್ ಡೂಪರ್ ಹಿಟ್ ಚಿತ್ರ ಕಿರಿಕ್ ಪಾರ್ಟಿ ನಿರ್ದೇಶಕ ರಿಷಬ್ ಶೆಟ್ಟಿ ಇಂದು ಮದುವೆಯಾದ್ರು. ಕುಂದಾಪುರ ಮೂಲದ ರಿಷಬ್ ತನ್ನ ತವರೂರಲ್ಲೇ ತೀರ್ಥಹಳ್ಳಿಯ ಪ್ರಗತಿಯ ಜೊತೆ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದರು. ಹಿರಿಯ ನಟ ಸುದೀಪ್ ಮದುವೆಯಲ್ಲಿ ಭಾಗವಹಿಸಿ ವಧುವರರನ್ನು ಆಶೀರ್ವದಿಸಿದ್ರು.
ರಿಷಬ್ ಆತ್ಮೀಯ ಗೆಳೆಯ ರಕ್ಷಿತ್ ಶೆಟ್ಟಿ ಮದುವೆ ಮನೆ ತುಂಬಾ ಓಡಾಡಿಕೊಂಡಿದ್ರು. ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಹಿತ ಸಂಪೂರ್ಣ ಕಿರಿಕ್ ತಂಡ ಮದುವೆಯಲ್ಲಿ ಹಾಜರಿತ್ತು. ಚಿತ್ರರಂಗದ ಇನ್ನೂ ಹಲವು ಗಣ್ಯರು ಮದುವೆಯಲ್ಲಿ ಭಾಗವಹಿಸಿದ್ರು.
