Asianet Suvarna News Asianet Suvarna News

ಬಚ್ಚನ್ ಫ್ಯಾಮಿಲಿಯಲ್ಲಿ ಬಿರುಗಾಳಿ!,ಐಶ್ ಮೇಲೇಕೆ ಜಯಾಗೆ ಸಿಟ್ಟು, ಇದು ಬ್ಲ್ಯಾಕ್ಮನಿಯಿಂದ ಆದದ್ದ ?

ಬಚ್ಚನ್​ ಫ್ಯಾಮಿಲಿ  ಕಲೆಗಾಗಿ ಬದುಕನ್ನೇ ಮುಡುಪಾಗಿಟ್ಟಿರೋ ಬಿಗ್​ ಫ್ಯಾಮಿಲಿ. ಅಮಿತಾಭ್​ ಇಡೀ ಬಾಲಿವುಡ್​ ಲೋಕವನ್ನೇ ಬೆರಗುಗೊಳಿಸುವಂತೆ ಬೆಳೆದು ನಿಂತ ನಾಯಕ. ಮಗ ಅಭಿಷೇಕ್​ ಬಚ್ಚನ್​ ಕೂಡ ಬಾಲಿವುಡ್​​ನಲ್ಲಿ  ಮಿಂಚಿದ್ದಾರೆ. ಇನ್ನು ಸೊಸೆ ಐಶ್ವರ್ಯ ರೈ ಕೂಡ ವಿಶ್ವ ಸುಂದರಿ ಎನಿಸಿಕೊಂಡಿರೋ ಬಾಲಿವುಡ್​ನ ಬಹುಬೇಡಿಕೆಯ ನಟಿ.  ಒಂದೇ ಮಾತಲ್ಲಿ ಹೇಳೋದಾದ್ರೆ, ಬಚ್ಚನ್​ ಫ್ಯಾಮಿಲಿ ಅಂದ್ರೆ ಸ್ಟಾರ್​ ಫ್ಯಾಮಿಲಿ​ ಆಗಿದೆ.

Rift at Amitabh Bachchan Family

ಇಡೀ ವಿಶ್ವದಲ್ಲೇ ಖ್ಯಾತಿ ಗಳಿಸಿರೋ ಫ್ಯಾಮಿಲಿ ಅಮಿತಾಭ್ ಅವರದ್ದು.  ಸ್ಟಾರ್​ ನಟರ ಕುಟುಂಬದಲ್ಲಿ ಇಷ್ಟು ದಿನ ಖುಷಿ ಇತ್ತು. ಆದ್ರೀಗ ಆ ಖುಷಿ ಮಾಯ ಆಗ್ತಾ ಇರೋ ಹಾಗೆ ಕಾಣಿಸ್ತಾ ಇದೆ. ಜಯಾ ಮತ್ತು ಬಿಗ್​ಬಿ ಬದುಕಲ್ಲಿ ಒಂದಷ್ಟು ಕಂದಕಗಳು ಕಾಣಿಸ್ತಾ ಇವೆಯೇನೋ ಅನ್ನಿಸ್ತಿದೆ. ಬಿಗ್ ಫ್ಯಾಮಿಲಿಯಲ್ಲಿ ಬಿರುಗಾಳಿ ಎದ್ದಿರೋ ಅತಿ ದೊಡ್ಡ ಸೂಚನೆ ಸಿಗ್ತಾ ಇದೆ. ಅಷ್ಟಕ್ಕೂ ಬಿಗ್​ಬಿ ಫ್ಯಾಮಿಲಿಯಲ್ಲಿ ಅಂಥಾದ್ದೇನಾಯ್ತು? ಬ್ಲ್ಯಾಕ್​ಮನಿ ವಿಷಯದಲ್ಲೇ ಬಚ್ಚನ್​ ಫ್ಯಾಮಿಲಿಯಲ್ಲಿ ಪ್ರಾಬ್ಲಂ ಶುರುವಾಯ್ತಾ? ಐಶ್​ ಮೇಲೂ ಜಯಾ ಬಚ್ಚನ್​ಗೆ ಸಿಟ್ಟಿದ್ಯಾ? ಬಣ್ಣದ ಲೋಕದಲ್ಲಿ ಭೇಷ್​ ಎನಿಸಿಕೊಂಡಿದ್ದ ಬಚ್ಚನ್​ ಫ್ಯಾಮಿಲಿಯಲ್ಲಿ ಏನಾಗ್ತಿದೆ? ಅದರ ಬಗ್ಗೆ  ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

ಕಲೆಗಾಗಿ ಮುಡುಪಿಟ್ಟ ಕುಟುಂಬ

ಬಚ್ಚನ್​ ಫ್ಯಾಮಿಲಿ  ಕಲೆಗಾಗಿ ಬದುಕನ್ನೇ ಮುಡುಪಾಗಿಟ್ಟಿರೋ ಬಿಗ್​ ಫ್ಯಾಮಿಲಿ. ಅಮಿತಾಭ್​ ಇಡೀ ಬಾಲಿವುಡ್​ ಲೋಕವನ್ನೇ ಬೆರಗುಗೊಳಿಸುವಂತೆ ಬೆಳೆದು ನಿಂತ ನಾಯಕ. ಮಗ ಅಭಿಷೇಕ್​ ಬಚ್ಚನ್​ ಕೂಡ ಬಾಲಿವುಡ್​​ನಲ್ಲಿ  ಮಿಂಚಿದ್ದಾರೆ. ಇನ್ನು ಸೊಸೆ ಐಶ್ವರ್ಯ ರೈ ಕೂಡ ವಿಶ್ವ ಸುಂದರಿ ಎನಿಸಿಕೊಂಡಿರೋ ಬಾಲಿವುಡ್​ನ ಬಹುಬೇಡಿಕೆಯ ನಟಿ.  ಒಂದೇ ಮಾತಲ್ಲಿ ಹೇಳೋದಾದ್ರೆ, ಬಚ್ಚನ್​ ಫ್ಯಾಮಿಲಿ ಅಂದ್ರೆ ಸ್ಟಾರ್​ ಫ್ಯಾಮಿಲಿ​ ಆಗಿದೆ.

ಇನ್ನು ಈ ಸ್ಟಾರ್​ ಫ್ಯಾಮಿಲಿಯಲ್ಲಿರೋ ಇನ್ನೊಬ್ರು ಸ್ಟಾರ್​ ಬಗ್ಗೆ ಹೇಳೋದನ್ನೇ ನಾವು ಮರೆತು ಬಿಟ್ವಿ. ಅಂದ್ಹಾಗೆ ಬಿಗ್​ ಫ್ಯಾಮಿಲಿಯಲ್ಲಿರೋ ಮತ್ತೊಬ್ರು ಬಿಗ್ ಸ್ಟಾರ್​ ಅಂದ್ದರೆ ಅದು ಅಮಿತಾಭ್​ ಬಚ್ಚನ್​ ಅವ್ರ ಧರ್ಮ ಪತ್ನಿ ಜಯ ಬಚ್ಚನ್​​.

ಜಯಾ ಬಚ್ಚನ್​​ ಕೂಡ ಒಂದು ಕಾಲದಲ್ಲಿ ಬಾಲಿವುಡ್​ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿದ್ದ ನಟಿ. ಒಂದು ಸಿನಿಮಾದಲ್ಲಿ ಅಮಿತಾಭ್​ ರಂಥ ದೊಡ್ಡ ನಟ ಇರ್ತಾರೆ ಅಂದ್ರೆ, ಅದರಲ್ಲಿ ಜಯಾ ಇರಲೇಬೇಕು ಅನ್ನೋ ಮಟ್ಟಕ್ಕೆ ಫೇಮಸ್ಸಾಗಿದ್ರು ಜಯ. ಇವ್ರು ಬಿಗ್​ಬಿನಷ್ಟೇ ವರ್ಚಸ್ಸು ಹೊಂದಿದ್ದ ನಟಿ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಬಿರುಕು ಕಾಣಿಸಿಕೊಂಡಿದೆ

ಬಾಲಿವುಡ್​ನ ಬಿಗ್ ಫ್ಯಾಮಿಲಿ, ಸ್ಟಾರ್​ ಫ್ಯಾಮಿಲಿ ಅಂತೆಲ್ಲಾ ಕರೆಸಿಕೊಳ್ತಿದ್ದ ಬಚ್ಚನ್​ ಫ್ಯಾಮಿಲಿಯಲ್ಲಿ ಈಗ ಬಿರುಕು ಕಾಣಿಸಿಕೊಳ್ತಿವೆ. ಅಂದ್ಹಾಗೆ ಇದು ಅತ್ತೆ ಸೊಸೆ ನಡುವಿನ ಜಗಳದ ವಿಷ್ಯ ಅಲ್ಲ. ಗಂಡ ಹೆಂಡತಿ ನಡುವಿನ ಕಂದಕಗಳು. ಜಯಾ ಬಚ್ಚನ್​ ಮತ್ತು ಅಮಿತಾಭ್​​ ಬಚ್ಚನ್​ ನಡುವಿನ ಬಾಂಧವ್ಯ ಮೊದಲಿನಂತೆ ಇಲ್ಲ ಅನ್ನೋದು ಈಗೀಗ ಬಹಿರಂಗವಾಗ್ತಿದೆ.

Click Here: ಕನ್ನಡದ ಯಾವ ನಟಿಯರು ಎಷ್ಟು ಓದಿದ್ದಾರೆ? ಇಲ್ಲಿದೆ ಡಿಟೇಲ್ಸ್

43 ವರ್ಷದ ದಾಂಪತ್ಯ

ಅಮಿತಾಭ್​ ಬಚ್ಚನ್ ಮತ್ತು ಜಯಾ ಬಚ್ಚನ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟು 43 ವರ್ಷಗಳೇ ಕಳೆದು ಹೋಗಿವೆ.  ಇಷ್ಟು ವರ್ಷ ಇಬ್ಬರ ನಡುವೆ ಯಾವುದೇ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ. ಆದ್ರೀಗ ಒಂದೊಂದೇ ಕಂದಕಗಳು ಕಾಣಿಸಿಕೊಳ್ತಿವೆ ಅಂತ ಹೇಳಲಾಗ್ತಿದೆ. ಜಯಾ ಬಚ್ಚನ್​ ಆಡೋ ಮಾತುಗಳು, ಮಾಡೋ ಕೆಲಸಗಗಳು ಬಿಗ್​ಬಿ ಫ್ಯಾಮಿಲಿಯಲ್ಲಿ ದೊಡ್ಡ ಸಮಸ್ಯೆಗಳನ್ನು ತಂದೊಡ್ಡುತ್ತಿವೆ ಅಂತ ಹೇಳಲಾಗ್ತಿದೆ. ಅದು ಬಿಗ್​ಬಿ ಮತ್ತು ಜಯಾ ನಡುವಿನ ವೈಮನಸ್ಸನ್ನ ಜಾಸ್ತಿ ಮಾಡ್ತಿವೆ ಅಂತ ಹೇಳಲಾಗ್ತಿದೆ.

ಅಮಿತಾಭ್​​ ಬಚ್ಚನ್​ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು 1969ರಲ್ಲಿ. ಸಾತ್​ ಹಿಂದೂಸ್ತಾನಿ​ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟವರು ಅವರು. ಆದ್ರೆ ಬಿಗ್​ಬಿ ತೆರೆ ಮೇಲೆ ಕಾಣಿಸಿಕೊಳ್ಳೋದಕ್ಕೂ ಮೊದಲೇ, ಬಂಗಾಳೀ ಸಿನಿಮಾ ರಂಗದಲ್ಲಿ ಸಾಕಷ್ಟು ಸದ್ದು ಮಾಡಿರ್ತಾರೆ ಜಯಾ ಬಾದುರಿ.

ಮಹಾನಗರ್ ಮೂಲಕ  ಎಂಟ್ರಿ

1963ರಲ್ಲೇ ಮಹಾನಗರ್ ಅನ್ನೋ ಸಿನಿಮಾ ಮೂಲಕ, ಜಯಾ ಬಾದುರಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾರೆ. ಇದಾದ 6 ವರ್ಷಗಳ ನಂತರ ಅಮಿತಾಭ್​ ಫೀಲ್ಡಿಗೆ ಎಂಟ್ರಿ ಕೊಡ್ತಾರೆ. 1971ರಲ್ಲಿ ಮೊಟ್ಟ ಮೊದಲ ಬಾರಿಗೆ ಜಯಾ ಬಾದುರಿ ಮತ್ತು ಅಮಿತಾಭ್​ ಬಚ್ಚನ್​ ಮೊಟ್ಟ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ತಾರೆ. ಆ ಸಿನಿಮಾ ಹೆಸರೇ ಗುಡ್ಡಿ..

ಬೆಸ್ಟ್ ಜೋಡಿ ಇವರು

1971ರಲ್ಲಿ ತೆರೆ ಮೇಲೆ ಒಂದಾಗಿ ಕಾಣಿಸಿಕೊಂಡ ಈ ಜೋಡಿ, ನಂತರದಲ್ಲಿ ಬಾಲಿವುಡ್​ನ ಬೆಸ್ಟ್ ಜೋಡಿ ಅಂತ ಖ್ಯಾತಿ ಗಳಿಸಿತ್ತು. ಯಾವ ಮಟ್ಟಕ್ಕೆ ಅಂದ್ರೆ, ಬಿಗ್​ಬಿ ಮತ್ತು ಜಯಾ ಬಾದುರಿ ಜೊತೆಗಿದ್ರೆ ಸಿನಿಮಾ ಹಿಟ್ ಆಗೋದು ಗ್ಯಾರಂಟಿ ಅನ್ನೋ ಮಟ್ಟಕ್ಕೆ ಚಿತ್ರ ನಿರ್ಮಾಪಕರು ಆಲೋಚನೆ ಮಾಡ್ತಿದ್ರು, ಇದರ ಪರಿಣಾಮವೋ ಏನೋ, ಒಂದರ ಹಿಂದೆ ಒಂದರಂತೆ ಜಯಾ ಮತ್ತು ಅಮಿತಾಬ್​ ಜೋಡಿಯ ಸಾಲು ಸಾಲು ಸಿನಿಮಾಗಳು  ತೆರೆಗೆ ಅಪ್ಪಳಿಸಿದ್ವು..

ಸಿನಿಮಾಗಳಲ್ಲಿ ಜೊತೆಗೆ ಕಾಣಿಸಿಕೊಂಡಿದ್ದ ಜಯಾ ಮತ್ತು ಅಮಿತಾಭ್​ ನಡುವೆ ಒಂಥರ ಗಾಢ ಸ್ನೇಹ ಬೆಳೆದಿತ್ತು. ಆ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಆ ಪ್ರೀತಿ ಮದುವೆಗೂ ಮುನ್ನುಡಿ ಹಾಕಿತ್ತು. 1973ರಲ್ಲಿ ರೀಲ್​ ಲೈಫಲ್ಲಿ ಒಂದಾಗಿದ್ದ ಈ ಜೋಡಿ, ರಿಯಲ್ ಲೈಫಲ್ಲೂ ಒಂದಾಗಿಬಿಡ್ತಾರೆ. ಜಯಾ ಮತ್ತು ಬಿಗ್​ಬಿ ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ.

ಸುಖ ದಾಂಪತ್ಯಕ್ಕೆ ಇಬ್ಬರು ಮಕ್ಕಳು

ಜಯಾ ಬಾದುರಿ ಬಿಗ್​ಬಿ ಅವ್ರನ್ನ ಮದುವೆಯಾಗಿದ್ದೇ ತಡ, ಜಯಾ ಬಚ್ಚನ್ ಆಗಿ ಬದಲಾಗಿ ಬಿಡ್ತಾರೆ. ಇವರ ಸುಖ ಸಂಸಾರದ ಪ್ರತೀಕವಾಗಿ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಕೂಡ ಜನಿಸುತ್ತೆ. ಹೆಣ್ಣು ಮಗಳು ಸಿನಿಮಾ ರಂಗಕ್ಕೆ ಬರೋದಿಲ್ಲ. ಆದ್ರೆ ಸಿನಿಮಾರಂಗದಲ್ಲಿ ಸದ್ದು ಮಾಡಿದ್ದು ಬಿಗ್​ಬಿ ಮತ್ತು ಜಯಾ

ಅಭಿಶೇಕ್​ ಬಚ್ಚನ್​ ಬಾಲಿವುಡ್​ನಲ್ಲಿ ಸಾಕಷ್ಟು ಸದ್ದು ಮಾಡ್ತಿದ್ದಾರೆ. ಸಾಲು ಸಾಲು ಹಿಟ್​ ಸಿನಿಮಾಗಳನ್ನ ನೀಡ್ತಾ ಇದ್ದಾರೆ. ಪರ್ಸನಲ್​ ಲೈಫೂ ಚೆನ್ನಾಗಿದೆ. ನಟಿ ಐಶ್ವರ್ಯ ರೈ ಜೊತೆ ಮದುವೆಯಾಗಿರೋ ಅಭಿಷೇಕ್​ ಬಚ್ಚನ್​ ಮುದ್ದಾದ ಮಗುವಿಗೆ ತಂದೇನೂ ಆಗಿದ್ದಾರೆ.

2004 ರಲ್ಲಿ ಜಯಾ ರಾಜಕೀಯ ಪ್ರವೇಶ

ಹೀಗೆ ಬಚ್ಚನ್​ ಫ್ಯಾಮಿಲಿ ಒಂದು ಸುಂದರ ಫ್ಯಾಮಿಲಿ ಅನ್ನೋ ತರ ಇತ್ತು. ಯಾವುದೇ  ಸಮಸ್ಯೆಗಳೂ ಕಾಣಿಸಿಕೊಂಡಿರಲಿಲ್ಲ.. ಇದರ ನಡುವಲ್ಲೇ ಜಯಾ ಬಚ್ಚನ್​ ಸಿನಿಮಾ ರಂಗವನ್ನ ಬಿಟ್ಟು, ನಿಧಾನವಾಗಿ ರಾಜಕೀಯದ ಕಡೆ ವಾಲಿದ್ರು. 2004ರಲ್ಲಿ  ಜಯಾ ಬಚ್ಚನ್​ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ರು.. ಸಮಾಜವಾದಿ ಪಕ್ಷಕ್ಕೆ ಜೈ ಎಂದಿದ್ದ ಜಯಾ ಬಚ್ಚನ್​, ಕಾಂಗ್ರೆಸ್​ ಜೊತೆಗೂ ಉತ್ತಮ ನಂಟು ಹೊಂದಿದ್ರು. ತೃಣಮೂಲ ಕಾಂಗ್ರೆಸ್​ ಜೊತೆಗೂ ಒಡನಾಟ ಇಟ್ಟುಕೊಂಡಿದ್ರು. ರಾಜ್ಯಸಭಾ ಸದಸ್ಯೆಯಾಗಿನೂ ಕೂಡ ಆಯ್ಕೆಯಾಗಿದ್ರು.

ಜಯಾ ಬಚ್ಚನ್​ ಏನೇ ಮಾಡಿದ್ರೂ, ಪತಿ ಅಮಿತಾಭ್​ ಬಚ್ಚನ್​ ಅಗ್ಲಿ, ಮಗ ಅಭಿಶೇಕ್​ ಬಚ್ಚನ್​ ಆಗ್ಲಿ ವಿರೋದಿಸ್ತಾ ಇರಲಿಲ್ಲ.. ಆದ್ರೀಗ ಜಯಾ ಇಡ್ತಾ ಇರೋ ಒಂದೊಂದು ಹೆಜ್ಜೆನೂ ಕುಟುಂಬದಲ್ಲು ಕಂದಕಗಳನ್ನ ಸೃಷ್ಟಿಸ್ತಾ ಇದೆ. ಅದರಲ್ಲೂ ಬಿಗ್​ಬಿ ಜೊತೆಗಿನ ಬಾಂಧವ್ಯದ ನಡುವಲ್ಲಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿ ಮಾಡ್ತಿದೆ. ಯಾವ ಮಟ್ಟಕ್ಕೆ ಅಂದ್ರೆ, ಬಿಗ್​ಬಿ ಮತ್ತು ಜಯಾ ನಡುವೆ ಹೊಂದಾಣಿಕೆನೇ ಇಲ್ವೇನೋ ಅನ್ನೋ ಮಟ್ಟಕ್ಕೆ ಜಯಾ ನಡೆ ಬದಲಾಗಿಬಿಟ್ಟಿದೆ.

ನೋಟ್ ಬ್ಯಾನ್, ಕಪ್ಪು ಹಣ  ಪ್ರಮುಖ ಕಾರಣ

ಇಷ್ಟು ದಿನ ಜಯಾ ಮತ್ತು ಬಿಗ್​ಬಿ ನಡುವಲ್ಲಿ ಸಣ್ಣಪುಟ್ಟ ವೈಮನಸ್ಸುಗಳಿದ್ವು,. ಆದ್ರೆ ಅದು ಅಷ್ಟಾಗಿ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ಆದ್ರೀಗ ಗಂಡ ಹೆಂಡತಿ ನಡುವಿನ ವಿಚಾರಗಳು ಜಗತ್ತಿಗೆ ಗೊತ್ತಾಗುವಂತೆ ಮಾಡಿದೆ. ಕಪ್ಪುಹಣದ ವಿಚಾರದಲ್ಲಿ ಗಂಡ ಹೆಂಡರಿ ನಡುವೆ ಶೀತಲ ಸಮರ ಸೃಷ್ಟಿಯಾಗಿದೆ ಅಂತ ಹೇಳಲಾಗ್ತಿದೆ. ಮೋದಿ ಯಾವಾಗ 1000,500 ರೂಪಾಯಿಗಳ ನೋಟ್​ಗಳನ್ನ ಬ್ಯಾನ್​ ಮಾಡಿದ್ರೋ, ಜಯಾ ಮತ್ತು ಬಿಗ್​ಬಿ ನಡುವೆ ದೊಡ್ಡ ಪ್ರಾಬ್ಲಂಗಳೇ ಸೃಷ್ಟಿಯಾಗಿಬಿಟ್ಟಿವೆ. ಏನು ತೇಪೆ ಹಾಕಿದ್ರೂ ಅದು ಸರಿ ಹೋಗಲ್ಲ ಅನ್ನೋ ಮಟ್ಟಕ್ಕೆ, ಜಯಾ ಮತ್ತು ಅಮಿತಾಬ್​ ನಡುವಿನ ಬಾಂಧವ್ಯಕ್ಕೆ ಹೊಡೆತ ಬಿದ್ದಿದೆ.

ಜಯಾ ಬಚ್ಚನ್​ ಒಂದ್ಕಡೆ ಕಾಂಗ್ರೆಸ್​​ ನೇತೃತ್ವದ ಯುಪಿಎ ಜೊತೆ ಗುರ್ತಿಸಿಕೊಂಡ್ರೆ, ಅಮಿತಾಭ್​ ಬಿಜೆಪಿ ನೇತೃತ್ವದ ಎನ್​ಡಿಎ ಜೊತೆ ನಂಟು ಬೆಳೆಸಿಕೊಂಡಿದ್ರು. ಅದರಲ್ಲೂ ಅಮಿತಾಭ್​ ಹೆಚ್ಚು ಒಡನಾಟ ಹೊಂದಿದ್ದು ಪ್ರಧಾನಿ ಮೋದಿಯವರ ಜೊತೆ.

ಮೋದಿ ಮತ್ತು ಬಿಗ್​ ಬಿ ನಡುವಿನ ನಂಟು ಇಂದು ನೆನ್ನೆಯದಲ್ಲ.. ಮೋದಿ ಗುಜರಾತ್​ ಸಿಎಂ ಆಗಿದ್ದಾಗಿಂದಲೂ, ಇಬ್ಬರ ನಡುವೆ ಅನುಬಂಧವಿತ್ತು. ಯಾವ ಮಟ್ಟಕ್ಕೆ ಅಂದ್ರೆ, ಗುಜರಾತ್​ ಪ್ರವಾಸೋದ್ಯಮಕ್ಕೆ ಬಿಗ್​ಬಿನೇ ರಾಯಭಾರಿಯಾಗಿದ್ರು..

ಗುಜರಾತ್​ ಏಳಿಗೆಯನ್ನೇ ಕಾಣದ ರಾಜ್ಯ ಅಂತ ಎಲ್ರೂ ಅಂದುಕೊಳ್ತಿದ್ರು. ಆದ್ರೆ ಮೋದಿ ಮತ್ತು ಅಮಿತಾಭ್​ ಜೋಡಿ, ಇಡೀ ಗುಜರಾತ್​ ಅನ್ನ ಪ್ರವಾಸಿ ತಾಣವಾಗಿ ಬದಲಾಯಿಸಿಬಿಟ್ಟಿತ್ತು. ಗುಜರಾತ್​ ಪ್ರಮೋಷನ್​ಗಾಗಿ ಮೋದಿ ಜೊತೆ ಕೈ ಜೋಡಿಸಿದ್ರು ಅಮಿತಾಭ್​.

ಹೀಗೆ ಗುಜರಾತ್​ ಅಭಿವೃದ್ದಿಯಲ್ಲಿ ಕೈ ಜೋಡಿಸಿದ್ದ ಅಮಿತಾಭ್​ ಇಂದಿಗೂ ಮೋದಿಗೆ ಬೆಂಬಲವಾಗೇ ನಿಂತಿದ್ದಾರೆ. ಪ್ರಧಾನಮಂತ್ರಿಯಾದ ಮೇಲೂ ಮೋದಿ ಜೊತೆ ಉತ್ತಮ ಅನುಬಂಧವನ್ನು ಹೊಂದಿದ್ದಾರೆ ಬಿಗ್​ಬಿ ಅಮಿತಾಭ್​ ಬಚ್ಚನ್​. ಬರೀ ಇವರಿಷ್ಟೆ ಅಲ್ಲ. ಬಿಗ್​ಬಿ ಮಗ ಅಭಿಷೇಕ್​ ಬಚ್ಚನ್​, ಸೊಸೆ ಐಶ್ವರ್ಯ ರೈ ಕೂಡ, ಮಾವನಂತೆ ಮೋದಿಗೆ ಜೈ ಅಂತಿದ್ದಾರೆ. ಇತ್ತೀಚೆಗಷ್ಟೇ 1000,500 ರೂಪಾಯಿ ನೋಟ್​ಗಳನ್ನ ಮೋದಿ ಬ್ಯಾನ್ ಮಾಡಿದಾಗ್ಲೂ, ಬಿಗ್​ಬಿ, ಐಶ್ವರ್ಯ ರೈ ಬೆಂಬಲ ವ್ಯಕ್ತಪಡಿಸಿದ್ರು.

ಮೋದಿಗೆ ಜಯ ಬೆಂಬಲ ನೀಡಲಿಲ್ಲ, ಅವರೆ  ಎಲ್ಲದಕ್ಕೂ  ಸಮಸ್ಯೆಯ ಬಿಂದು

ಹೀಗೆ ಬಿಗ್​ಬಿ ಫ್ಯಾಮಿಲಿಯಲ್ಲಿರೋ ಬಹುತೇಕ ಮಂದಿ ಮೋದಿಗೆ ಬೆಂಬಲ ಸೂಚಿಸ್ತಾ ಇದ್ದಾರೆ. ಮೋದಿ ಮಾಡಿದ್ದು ಸರಿ ಅಂತಿದ್ದಾರೆ. ಆದ್ರೆ ಒಬ್ರುಮಾತ್ರ ಮೋದಿ ಮಾಡಿದ್ದು ಸರಿ ಇಲ್ಲ ಅಂತ ವಿರೋಧಿಸಿದ್ರು. ಮೋದಿ ವಿರುದ್ಧ ಪ್ರತಿಭಟನೆಗೆ ಇಳಿದಿದ್ರು. ಅವ್ರೆ ಬಿಗ್​ಬಿ ಧರ್ಮಪತ್ನಿ ಜಯಾ ಬಚ್ಚನ್​.

ಬಿಗ್​ಬಿ ಫ್ಯಾಮಿಲಿಯಲ್ಲಿ ಭಿನ್ನರಾಗ ಹಾಡ್ತಾ ಇರೋದು ನಟಿ ಕಂ ರಾಜಕಾರಣಿಯಾಗಿರೋ ಜಯ ಬಚ್ಚನ್​ ಅಂತ ಹೇಳಲಾಗುತ್ತಿದೆ. ರಾಜಕೀಯ ಉದ್ದೇಶದಿಂದ ಮೋದಿ ನೋಟ್​ ಬ್ಯಾನ್ ಮಾಡಿರೋದನ್ನ ಖಂಡಿಸಿರೋ ಜಯಾ, ಮಮತಾ ಬ್ಯಾನರ್ಜಿ ಜೊತೆಗಿನ ಆಕ್ರೋಶ್​ ದಿವಸ್​ನಲ್ಲಿ ಭಾಗವಹಿಸಿದ್ರು.. ಇದು ನೋಟ್​ ಬ್ಯಾನ್​ಗೆ ಸಪೋರ್ಟ್ ಮಾಡಿದ್ದ ಬಿಗ್​ಬಿ ಮತ್ತು ಜಯಾ ನಡುವಿನ ಕಂದಕಕ್ಕೆ ಮುನ್ನುಡಿ ಹಾಕಿದೆ.

ಸೊಸೆ ಜೊತೆ ಕೂಡ ಚೆನ್ನಾಗಿಲ್ಲ

ಇನ್ನು ಸೊಸೆ ಐಶ್ವರ್ಯ ರೈ ಮತ್ತು ಜಯಾ ನಡುವಿನ ಸಂಬಂಧಾನೂ ಅಷ್ಟೇನೂ ಚೆನ್ನಾಗಿಲ್ಲ ಅಂಥ ಹೇಳಲಾಗ್ತಿದೆ. ಸಣ್ಣ ಸಣ್ಣ ಮಾತಿಗೂ ಮನೆಯಲ್ಲಿ ಕಿರಿಕ್ ಶುರುವಾಗ್ತಿದೆ ಅಂತಾನೂ ಹೇಳಲಾಗುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನಟಿ ಐಶ್ರ್ವ ರೈ ಯಾವ ಸಿನಿಮಾಗಳಲ್ಲಿ ಕಾಣಿಸಿಕೊಂಡ್ರೂ, ಅತ್ತೆ ಜಯಾ ಬಚ್ಚನ್​ ಟೀಕೆ ಮಾಡ್ತಿದ್ದಾರಂತೆ. ಇತ್ತೀಚೆಗಷ್ಟೇ ರಿಲೀಸ್ ಶಾಗಿದ್ದ ಎ ದಿಲ್ ಹೈ ಮುಷ್ಕಿಲ್ ಸಿನಿಮಾದಲ್ಲೂ ಐಶ್ರ್ವ ರೈ  ಸ್ವಲ್ಪ ಹಾಟ್​ ಆಗಿ ನಟಿಸಿದ್ದರು.

ಈ ದೃಶ್ಯವನ್ನ ಅತ್ತೆ ಜಯಾ ನೋಡಿ ಕೆಂಡಾಮಂಡಲರಾಗಿದ್ರು ಅಂತ ಹೇಳಲಾಗ್ತಿದೆ. ಈ ಥರ ಸೀನ್​ಗಳಲ್ಲಿ ನಟಿಸಿದ್ರೆ ಮಾನ ಮರ್ಯಾದೆ ಏನಾಗಬೇಕು ಅಂತೆಲ್ಲಾ ಗರಂ ಆಗಿ ಗುಡುಗಿದ್ರಂತೆ. ಸಿನಿಮಾ ಅಂದ್ಮೆಲೆ ಈ ಥರ ಸೀನ್​ಗಳೆಲ್ಲಾ ಕಾಮನ್​. ಅದು ಜಯಾಗೂ ಗೊತ್ತಿದೆ. ಇಷ್ಟಿದ್ರೂ ನನ್ನ ಮೇಲೆ ಈ ಥರ ಟೀಕೆಗಳನ್ನ ಮಾಡ್ತಾ ಇರೋದು ಎಷ್ಟು ಸರಿ ಅನ್ನೋ ಪ್ರಶ್ನೆ ಐಶ್ವರ್ಯ ರೈ ಅವ್ರದ್ದು. ಆದ್ರೂ ಮನೆ ಜಗಳ ಬೀದಿಗೆ ಬರಬಾರದಲ್ಲ ಅನ್ನೋ ಕಾರಣಕ್ಕೆ, ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದಾರಂತೆ ಐಶ್ವರ್ಯ.

ಒಟ್ನಲ್ಲಿ ಎಲ್ಲರ ಮನೆ ಮಾತಾಗಿದ್ದ ಬಿಗ್​ ಬಿ ಫ್ಯಾಮಿಲಿ, ಈಗ ಎಲ್ಲರ ಬಾಯಿಗೆ ಆಹಾರವಾಗ್ತಾ ಇದೆಯೇನೋ ಅಂತ ಅನ್ನಿಸ್ತಾ ಇದೆ. ಇದಕ್ಕೆ ಪುಷ್ಟಿ ನೀಡುವಂಥ ಘಟನೆಗಳು ನಡೀತಾ ಇರೋದು ಕೂಡ, ಬಿಗ್​ ಬಿ ಫ್ಯಾಮಿಲಿಯಲ್ಲಿ ಎಲ್ಲವೂ ಸರಿ ಇಲ್ವೇನೋ ಅನ್ನೋದನ್ನ ಒತ್ತಿ ಹೇಳ್ತಾ ಇದೆ. ಇದೆಲ್ಲವನ್ನ ನೋಡ್ತಾ ಇದ್ರೆ, ಜಯಾ ಬಚ್ಚನ್​ ದಾರಿನೇ ಒಂಥರ ಇದೆ. ಉಳಿದ ಮನೆ ಮಂದಿ ದಾರೀನೇ ಇನ್ನೊಂದ್​ ಥರ ಇದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಇದು ಬಿಗ್​ಬಿ ಫ್ಯಾಮಿಲಿ ಎಲ್ಲಿ ಬ್ರೇಕಪ್ ಆಗುತ್ತೋ ಅನ್ನಫೋ ಆತಂಕವನ್ನೂ ಮೂಡಿಸ್ತಾ ಇದೆ.

ವರದಿ: ಶೇಖರ್ ಪೂಜಾರ್, ಸುವರ್ಣ ನ್ಯೂಸ್

Follow Us:
Download App:
  • android
  • ios