ಬೆಂಗಳೂರು[ಜ.06] ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಒಂದು ಸುದ್ದಿ ಕೊಟ್ಟಿದ್ದಾರೆ. ಈ ಬಾರಿ ತಮ್ಮ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಸಿನಿಮಾ ಕುಟುಂಬದ ಹಿರಿಯ  ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲ ಅಗಲಿದ್ದಾರೆ. ಹಾಗಾಗಿ ಜನ್ಮದಿನ ಸಂಭ್ರಮ ಬೇಡ ಎಂದು ತೀರ್ಮಾನ ಮಾಡಿದ್ದೇವೆ. ಕೆಜಿಎಫ್ ಎಲ್ಲ ಕಡೆ ಸದ್ದು ಮಾಡಿ ಯಶಸ್ವಿಯಾಗಿದ್ದು ಅಭಿಮಾನಿಗಳಿ್ಗೆ ವಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಯಶ್ ಮಗಳಿಗೆ ಅಂಬರೀಶ್ ಕೊಟ್ಟ ಉಡುಗೊರೆ

ಯಶೋಯಾತ್ರೆ ಮೂಲಕ ನಿಮ್ಮ ಊರಿಗೆ ಬಂದು ನಿಮ್ಮನ್ನು ಭೇಟಿ ಮಾಡುತ್ತೇನೆ. ಅಭಿಮಾನಿಗಳು ಜತೆಗಿದ್ದರೆ ಯಾವ ಅಡ್ಡಿ ಆತಂಕ ಬಂದರೂ ಹೆದರಬೇಕಾಗಿಲ್ಲ. ನೀವು ಗೆಲ್ಲುತ್ತಾ ಇರಿ..ಗೆಲ್ಲುತ್ತಲೆ ಹೋಗೋಣ.. ಎಂದಿದ್ದಾರೆ.