ರಾಕಿಂಗ್ ಸ್ಟಾರ್ ಯಶ್ ತೆಲುಗು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆನ್ನುವ ಸುದ್ದಿಗೆ ಬ್ರೇಕ್ ಬಿದ್ದಿದೆ. ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಚಿತ್ರದಲ್ಲಿ ಯಶ್ ನಟಿಸಬೇಕಾಗಿತ್ತು. ಆ ಚಿತ್ರದ ಕತೆಯನ್ನು ಪುರಿ ಜಗನ್ನಾಥ್, ಯಶ್‌ಗೆ ಹೇಳಿದ್ದರು ಎನ್ನಲಾಗಿತ್ತು. ಆದರೆ ಆ ಚಿತ್ರವನ್ನು ಯಶ್ ತಿರಸ್ಕರಿಸಿದ್ದಾರೆ.

ಜಗನ್ನಾಥ್ ಚಿತ್ರಕ್ಕೆ ಯಶ್ ಬದಲು ವಿಜಯ್ ದೇವರಕೊಂಡ ಪಕ್ಕಾ!

ಯಶ್ ತಿರಸ್ಕರಿಸಿದ ಆ ಚಿತ್ರವನ್ನು ವಿಜಯ್ ದೇವರಕೊಂಡ ಒಪ್ಪಿಕೊಂಡಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ಜತೆಗೆ ಪುರಿ ಜಗನ್ನಾಥ್ ಸಿನಿಮಾ ಮಾಡಲಿದ್ದಾರೆಂದಾಗ ಟಾಲಿವುಡ್‌ನಲ್ಲಿ ಹೆಚ್ಚು ಗಾಸಿಪ್ ಆಗಿದ್ದು ‘ಜನ ಮನ ಗಣ’ ಚಿತ್ರ. ಕೊನೆಗೆ
ಅದೆನಾಯ್ತೋ ಗೊತ್ತಿಲ್ಲ. ಆ ಚಿತ್ರದಲ್ಲಿ ಮಹೇಶ್ ಬಾಬು ಅಭಿನಯಿಸುತ್ತಿಲ್ಲ ಎನ್ನುವಾಗಲೇ ಆ ಚಿತ್ರಕ್ಕೆ ತಳುಕು ಹಾಕಿಕೊಂಡಿದ್ದು ಕನ್ನಡ ಸ್ಟಾರ್ ನಟ ಯಶ್ ಹೆಸರು. ಆ ಸಂಬಂಧ ಪುರಿ ಹಾಗೂ ಯಶ್ ನಡುವೆ ಬೆಂಗಳೂರಿನಲ್ಲೇ ಎರಡು ಸುತ್ತಿನ ಮಾತುಕತೆಯೂ ನಡೆದಿದೆ ಎನ್ನುವ ಸುದ್ದಿಗಳು ಟಾಲಿವುಡ್ ಅಂಗಳದಿಂದಲೇ ಕೇಳಿ ಬಂದಿದ್ದವು.

ರಶ್ಮಿಕಾ ಮೇಲೆ ಕಾಲಿಟ್ಟು ಉದ್ಧಟತನ ತೋರಿಸಿದ ವಿಜಯ್ ದೇವರಕೊಂಡ!

ಆ ಸಿನಿಮಾಕ್ಕೀಗ ವಿಜಯ್ ದೇವರಕೊಂಡ ಬಂದಿದ್ದಾರೆ. ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬರಲಿದ್ದಾರೆನ್ನುವ ಸುದ್ದಿಗಳು ಇವೆ. 

ಕಥೆ ಇಷ್ಟವಾಗದಿದ್ದು ಕಾರಣವಾ?

ಯಶ್ ಈ ಸಿನಿಮಾ ಯಾಕೆ ಕೈ ಬಿಟ್ಟರು ಅನ್ನೋದು ಕುತೂಹಲಕರ ವಿಷಯ. ಅದಕ್ಕೆ ಕಾರಣ ಕತೆಯೇ ಎನ್ನುತ್ತಿವೆ ಮೂಲಗಳು. ‘ಕೆಜಿಎಫ್’ ಚಿತ್ರದ ಬಹುದೊಡ್ಡ ಸಕ್ಸಸ್ ನಂತರ ನಟ ಯಶ್ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಮುಂದಿನ ಯಾವುದೇ ಸಿನಿಮಾದ ಕತೆಗಳನ್ನು ಅಳೆದು-ತೂಗಿ ಆಯ್ಕೆ ಮಾಡಿಕೊಳ್ಳಬೇಕಿದೆ.

ಅಷ್ಟೇ ಅಲ್ಲದೆ, ಬೇರೆ ಭಾಷೆಯ ಸಿನಿಮಾ ಮಾಡುವಾಗಲೂ ತುಂಬಾ ಯೋಚಿಸಬೇಕಿದೆ. ಅದೆಲ್ಲವನ್ನು ಯೋಚಿಸುವಾಗ ಪುರಿ ಜಗನ್ನಾಥ್ ಹೇಳಿದ ಕತೆ ಮತ್ತು ಅಲ್ಲಿದ್ದ ಅವರ ಪಾತ್ರ ಅಷ್ಟಾಗಿ ಇಷ್ಟವಾಗದ ಕಾರಣದಿಂದಲೇ ಕೆಜಿಎಫ್ 2 ಚಿತ್ರದ ಚಿತ್ರೀಕರಣದ ನೆಪದಲ್ಲಿ ಪುರಿ ಸಿನಿಮಾವನ್ನು ತಿರಸ್ಕರಿಸಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.