ಕಬ್ಜ ಸಿನಿಮಾದ ಮಾಸ್ ಸಾಂಗ್ ಮೇಕಿಂಗ್ ವಿಡಿಯೋ ಲೀಕ್: ಜಾನಿ ಮಾಸ್ಟರ್‌ಗೆ ಸ್ಟೆಪ್ಸ್ ಹೇಳಿಕೊಟ್ಟ ಉಪ್ಪಿ!
ನಿರ್ದೇಶಕ ಆರ್.ಚಂದ್ರು ಆಕ್ಷನ್ ಕಟ್ ಹೇಳಿರುವ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಭಿನಯದ ಕಬ್ಜ ಸಿನಿಮಾದ ಹಾಡಿನ ಮೇಕಿಂಗ್ ವಿಡಿಯೋ ಲೀಕ್ ಆಗಿದ್ದು, ಜಾನಿ ಮಾಸ್ಟರ್‌ಗೆ ಉಪೇಂದ್ರ ತಮ್ಮ ಸಿಗ್ನೇಚರ್ ಸ್ಟೆಪ್ ಹೇಳಿಕೊಟ್ಟಿದ್ದಾರೆ.
ನಿರ್ದೇಶಕ ಆರ್.ಚಂದ್ರು ಆಕ್ಷನ್ ಕಟ್ ಹೇಳಿರುವ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಭಿನಯದ ಕಬ್ಜ ಸಿನಿಮಾದ ರಿಲೀಸ್ ದಿನಗಳು ಇನ್ನು ದೂರ ಇದೆ. ಆದರೆ ಅದಕ್ಕೂ ಮೊದಲೇ ಚಿತ್ರದ ಸಾಂಗ್ ಹಾಗೂ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿವೆ. ಸಿನಿಮಾ ಪ್ರೇಮಿಗಳಲ್ಲಿ ಕಬ್ಜ ಒಂದು ಸಣ್ಣ ವೈಬ್ರೇಷನ್ ಕ್ರಿಯೇಟ್ ಮಾಡುತ್ತಿದೆ. ಈಗಾಗಲೇ ರವಿ ಬಸ್ರೂರು ಸಂಗೀತದಲ್ಲಿ ಮೂಡಿಬಂದಿರುವ ಚಿತ್ರದ ಟೈಟಲ್ ಟ್ರ್ಯಾಕ್‌ಗೆ ಸಿನಿಮಾ ಪ್ರೇಮಿಗಳು ಫಿದಾ ಆಗಿದ್ದಾರೆ. ಅಲ್ಲದೇ ಕಬ್ಜ ಸಿನಿಮಾದ ಇತರ ಹಾಡುಗಳು ಇದೇ ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದ್ದು, ಇದೀಗ ಕಬ್ಜ ಸಿನಿಮಾದ ಮಾಸ್ ಸಾಂಗ್ ಮೇಕಿಂಗ್ ವೀಡಿಯೋ ಲೀಕ್ ಆಗಿದೆ.
ಹೌದು! ಲೀಕ್ ಆಗಿರುವ ಈ ಮೇಕಿಂಗ್ ವಿಡಿಯೋದಲ್ಲಿ ನಟ ಉಪೇಂದ್ರ ಸಿಗ್ನೇಚರ್ ಸ್ಟೆಪ್ ಹಾಕಿದ್ದಾರೆ. ಬರೋಬ್ಬರಿ 500ಕ್ಕೂ ಹೆಚ್ಚು ಡ್ಯಾನ್ಸರ್‌ಗಳ ಮಧ್ಯದಲ್ಲಿ ಉಪ್ಪಿ ಭರ್ಜರಿ ಡಾನ್ಸ್ ಮಾಡಿದ್ದಾರೆ. ಹಿಂದೆಂದೂ ನೋಡದ ರೀತಿಯಲ್ಲಿ ಕಬ್ಜದ ಮತ್ತೊಂದು ಹಾಡು ರೆಡಿಯಾಗಿದ್ದು, ಜಾನಿ ಮಾಸ್ಟರ್ ಕೋರಿಯೋಗ್ರಫಿಯಲ್ಲಿ ಅದ್ದೂರಿ ಸಾಂಗ್ ಮೂಡಿಬಂದಿದೆ. ವಿಶೇಷವಾಗಿ ಈ ವಿಡಿಯೋದಲ್ಲಿ ಜಾನಿ ಮಾಸ್ಟರ್‌ಗೆ ರಿಯಲ್ ಸ್ಟಾರ್ ಉಪೇಂದ್ರ ಸ್ಟೆಪ್ಸ್ ಹೇಳಿಕೊಟ್ಟಿದ್ದಾರೆ. ಆರ್.ಚಂದ್ರು ನಿರ್ದೇಶಿಸಿರುವ ಬಿಗ್ ಬಜೆಟ್ ಸಿನಿಮಾದ ಅದ್ದೂರಿ ಸಾಂಗ್ ಮೇಕಿಂಗ್ ಝಲಕ್ ಇದಾಗಿದೆ. ಪವರ್ ಸ್ಟಾರ್ ಪುನೀತ್ ಹುಟ್ಟುಹಬ್ಬದಂದು ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ.
'ಕಬ್ಜ' ತಂಡದಿಂದ ಸಿಕ್ತು ಭರ್ಜರಿ ಸುದ್ದಿ; ವಿಶೇಷ ದಿನದಂದು ರಿಲೀಸ್ ಆಗ್ತಿದೆ ರಿಯಲ್ ಸ್ಟಾರ್ ಸಿನಿಮಾ
ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಚಿತ್ರಕ್ಕೆ ಪುನೀತ್ ರಾಜಕುಮಾರ್ ಅವರು ನೀಡುತ್ತಿದ್ದ ಪ್ರೋತ್ಸಾಹ ಅಪಾರ ಎಂದು ನಿರ್ಮಾಣ ಸಂಸ್ಥೆ ಹೇಳಿದೆ. 'ಚಿತ್ರದ ಕೆಲವು ತುಣುಕುಗಳನ್ನು ಅವರಿಗೆ ತೋರಿಸಿದ್ದಾಗ ಹಾಲಿವುಡ್ ಚಿತ್ರ ಇದ್ದ ಹಾಗೆ ಇದೆ ಎಂದು ಹೇಳಿ ಮೆಚ್ಚುಗೆ ಸೂಚಿಸಿದ್ದರು. ಅಭಿಮಾನಿಗಳ ಪಾಲಿಗಂತೂ ದೇವರೆ ಆಗಿರುವ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಕಬ್ಬ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದೇವೆ. ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಹಾಗೂ ಹೊಸವರ್ಷದ ಮೊದಲ ದಿನವಾದ ಯುಗಾದಿ ಹಬ್ಬದ ಸಮೀಪದಲ್ಲೇ ನಮ್ಮ ಚಿತ್ರ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ' ಎಂದು ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆ ಬಹಿರಂಗ ಪಡಿಸಿದೆ.
ಕಳೆದ ವರ್ಷ ಕನ್ನಡದ ಸಾಕಷ್ಟು ಚಿತ್ರಗಳು ಭರ್ಜರಿ ಯಶಸ್ಸು ಕಂಡಿತ್ತು. ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ನೋಡುವಂತಾಗಿತ್ತು. ಈಗ ಎಲ್ಲೆಡೆ ಅಷ್ಟೇ ಕುತೂಹಲದಿಂದ ಕಾಯತ್ತಿರುವ ಹಾಗೂ ಐಎಂಡಿಬಿ 2023ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡಿದಿರುವ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಚಿತ್ರ ಕಬ್ಜ ಆಗಿದೆ. ಈಗಾಗಲೇ ಫಸ್ಟ್ ಲುಕ್, ಟೀಸರ್ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಕಬ್ಜ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಈ ಸಿನಿಮಾವನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.
Kabzaa ಅಮೆಜಾನ್ ಪ್ರೈಮ್‌ಗೆ ಉಪೇಂದ್ರ-ಸುದೀಪ್ ಕಬ್ಜ ಓಟಿಟಿ ಹಕ್ಕು ಮಾರಾಟ!
ಇನ್ನು 'ಕಬ್ಜ' ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ನಟಿ ಶ್ರೇಯಾ ಶರಣ್, ಬಾಲಿವುಡ್‌ನ ಖ್ಯಾತ ನಟ ನವಾಬ್ ಶಾ ತಮಿಳಿನ 'ಐ' ಚಿತ್ರದ ಖ್ಯಾತಿಯ ಕಾಮರಾಜನ್, ಟಾಲಿವುಡ್ ವಿಲನ್ ಜಗಪತಿ ಬಾಬು, ರಾಹುಲ್ ದೇವ್, ಸುನಿಲ್ ಪುರಾಣಿಕ್, ಲಕ್ಷ್ಮೀಶ ಲಕ್ಷ್ಮಣ್ (ಲಕ್ಕಿ ಲಕ್ಷ್ಮಣ್), ಪ್ರಮೋದ್ ಶೆಟ್ಟಿ, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್, ಪೀಟರ್ ಹೆನ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.