ಆರ್. ಚಂದ್ರು ನಿರ್ದೇಶನ ‘ಐ ಲವ್ ಯು’ ಚಿತ್ರದಲ್ಲಿ ಆ ಹಳೇ ಉಪೇಂದ್ರ ಹೊಸ ರೀತಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಿಕೊಂಡಿರುವ ರಿಯಲ್ ಸ್ಟಾರ್ ತಮ್ಮ ಹೆಸರಿಗ ತಕ್ಕಂತೆ ಆಲ್‌ಮೋಸ್ಟ್ ಹುಟ್ಟುಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ. ಹಾಗಾಗಿ ‘ಐ ಲವ್ ಯು’ ಚಿತ್ರದ ಫಸ್ಟ್‌ಲುಕ್ ವೈರಲ್ ಆಗಿದೆ. ಈ ಗೆಟಪ್ ಯಾಕೆ ಎಂದಿದ್ದಕ್ಕೆ ನಿರ್ದೇಶಕ ಚಂದ್ರು ಕೊಟ್ಟ ಕಾರಣಗಳಿವು.
- ತೆಲುಗು, ತಮಿಳು ಸಿನಿಮಾ ಮಂದಿ ಏನ್ ಮಾಡಿದ್ರು ಹೊಸದು ಅಂತೀರಾ, ನಾವೇನಾದ್ರು ಡಿಫೆರೆಂಟ್ ಮಾಡಿದ್ರೆ ಇದ್ಯಾಕೆ ಅಂತೀರಾ...
- ಚಿತ್ರದ ಕತೆಯೇ ವಿಶೇಷವಾದದ್ದು. ಉಪೇಂದ್ರ ಅವರನ್ನು ಕೊಂಚ ಭಿನ್ನವಾಗಿ ತೋರಿಸೋಣ ಅಂತ ಹೊರಟಾಗ ನನಗೆ ಅನಿಸಿದ್ದು ಹಾಗೆ. ಹಾಗಂತ ಅದನ್ನು ಸುಮ್ಮನೆ ತಂದಿಲ್ಲ. ಅವರ ಪಾತ್ರವನ್ನು ಫಸ್ಟ್ ಲುಕ್‌ನಲ್ಲೇ ವಿಭಿನ್ನವಾಗಿ ತೋರಿಸಬೇಕೆಂದುಕೊಂಡಿದ್ದೆ. ಆಗ ನನಗೆ ಹೊಳೆದಿದ್ದು ಇಂತಹದೊಂದು ಲುಕ್. ಈ ಐಡಿಯಾವನ್ನು ಉಪ್ಪಿ ಸರ್ ಕೂಡ ಮೆಚ್ಚಿಕೊಂಡರು

ಅರೇ ಉಪ್ಪಿಗೇನಾಯ್ತು!? ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ ರಿಯಲ್ ಸ್ಟಾರ್!