ಕ್ರೇಜಿಸ್ಟಾರ್ ಮಗಳ ಮದುವೆಗೆ ವೋಚರನ್ನೇ ಉಡುಗೊರೆಯಾಗಿ ತೆಗೆದುಕೊಂಡು ಬನ್ನಿ!
ಗಾಜಿನ ಅರಮನೆಯಲ್ಲಿ ಮೇ.29ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಗೀತಾಂಜಲಿ ಮದುವೆಗೆ ತಂದೆ ರವಿಚಂದ್ರನ್ ಅತಿಥಿಗಳಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ.
ನಟ ರವಿಚಂದ್ರನ್ ತಮ್ಮ ಮುದ್ದಿನ ಮಗಳ ಮದುವೆಯನ್ನು ಅದ್ಧೂರಿಯಾಗಿ ಬಂಧು-ಮಿತ್ರರು, ಮಾಧ್ಯಮದವರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಮೇ 29 ಕ್ಕೆ ಮಾಡಲಿದ್ದಾರೆ. ಮದುವೆಗೆ ಅಗಮಿಸುವ ಅತಿಥಿಗಳಿಗೆ ಕ್ರೇಜಿಸ್ಟಾರ್ ಮನವಿವೊಂದನ್ನು ಮಾಡಿಕೊಂಡಿದ್ದಾರೆ.
ಕ್ರೇಜಿ ನಟನಿಗೆ ಹೂಗಳೆಂದರೆ ಫುಲ್ ಫೇವರೆಟ್. ಆದರೆ ಮಗಳ ಮದುವೆಗೆ ದಯಮಾಡಿ ಹೂ ಬೇಡ ಎಂದಿದ್ದಾರೆ. 'ಮಗಳ ಮದುವೆಗೆ ಉಡುಗೊರೆಯಾಗಿ ಯಾರೂ ಹೂಗುಚ್ಚ ತರಬೇಡಿ. ಅದೇ ವೆಚ್ಚದ ವೋಚರ್ ತೆಗೆದುಕೊಂಡು ಬನ್ನಿ. ಅದನ್ನು ಒಟ್ಟಾಗಿಸಿ ಅನಾಥಾಶ್ರಮಕ್ಕೆ ಕೊಡುತ್ತೇನೆ. ಇದರಿಂದ ಅದೆಷ್ಟೋ ಮಕ್ಕಳಿಗೆ ಅನುಕೂಲವಾಗುತ್ತದೆ' ಎಂದು ಮಾಧ್ಯಮದವರಿಗೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಾರೆ.
ಗಾಜಿನ ಅರಮನೆಯಲ್ಲಿ ಕ್ರೇಜಿಸ್ಟಾರ್ ಮಗಳ ಅದ್ಧೂರಿ ಮದುವೆ!
ಅದಕ್ಕೆ ಮದುವೆ ಮನೆಯ ಅಲಂಕಾರವನ್ನು ಹೂವನ್ನು ಬಳಸದೇ ಸಂಪೂರ್ಣವಾಗಿ ಗಾಜಿನಿಂದ ಸ್ಟೇಜ್ ರೆಡಿ ಮಾಡುವುದಾಗಿ ನಿರ್ಧಾರಿಸಿದ್ದಾರೆ