ಒಂದು ಕಡೆ ರಕ್ಷಿತ್ ಶೆಟ್ಟಿ ಅವರೊಂದಿಗೆ ಎಂಗೆಜ್ ಮೆಂಟ್ ಮುರಿದುಕೊಂಡಿರುವ ರಶ್ಮಿಕಾ ಮಂದಣ್ಣ ಕನ್ನಡದ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಹಾಗಾದರೆ ರಶ್ಮಿಕಾ ನೀಡಿರುವ ಆಘಾತಕಾರಿ ಸುದ್ದಿ ಏನು?

ಗೀತಾ ಗೋವಿಂದಂ ಚಿತ್ರದ ನಂತರ ರಶ್ಮಿಕಾಗೆ ತೆಲುಗಿನಲ್ಲಿ ಅವಕಾಶಗಳ ಮಹಾಪೂರವೇ ಹರಿದು ಬಂದಿದೆ. ರಶ್ಮಿಕಾ ಕನ್ನಡದ ‘ವೃತ್ರ‘ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ಕೊನೆಯ ಹಂತದಲ್ಲಿ ನಟಿ ಚಿತ್ರದಿಂದ ಹೊರಬಿದ್ದಿದ್ದಾರೆ.

ರಶ್ಮಿಕಾ ಮಂದಣ್ಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ತೆಲುಗಿನ ಕೆಲ ಚಿತ್ರಗಳಲ್ಲಿ ನಟಿಸುತ್ತಿದ್ದು ಕನ್ನಡದ ವೃತ್ರ ಚಿತ್ರದಲ್ಲೂ ನಟಿಸಬೇಕಿತ್ತು. ಅದಾಗಲೇ ನಿರ್ದೇಶಕ ಗೌತಮ್ ಅಯ್ಯರ್ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು. ಆದರೆ ನಟಿ ಚಿತ್ರದಿಂದ ಹೊರಬಿದ್ದಿದ್ದಾರೆ। ಈ ವಿಚಾರವನ್ನು ಸ್ವತಃ ರಶ್ಮಿಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಿರ್ದೇಶಕ ಗೌತಮ್ ಅಯ್ಯರ್ ಮತ್ತು ತಂಡಕ್ಕೆ ಗುಡ್ ಲಕ್ ಹೇಳಿರುವ ರಶ್ಮಿಕಾ ನನಗಿಂತಲೂ ಉತ್ತಮವಾಗಿ ಪಾತ್ರ ನಿರ್ವಹಿಸುವರು ಸಿಗುತ್ತಾರೆ ಎಂದು ಹೇಳಿದ್ದಾರೆ.

Scroll to load tweet…