‘ಆರ್ಯ’ ಚಿತ್ರದ ಖ್ಯಾತಿಯ ನಿರ್ದೇಶಕ ಸುಕುಮಾರ್‌ ಹಾಗೂ ಅಲ್ಲು ಅರ್ಜುನ್‌ ಜೋಡಿಯ ಹೊಸ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಆಗಿದ್ದಾರೆ. ಇದು ಅಲ್ಲು ಅರ್ಜುನ್‌ ಅಭಿನಯದ 20ನೇ ಸಿನಿಮಾ. ಸದ್ಯಕ್ಕೀಗ ಚಿತ್ರಕ್ಕೆ ಚಿತ್ರೀಕರಣದ ಸಿದ್ಧತೆ ನಡೆದಿದ್ದು, ರಶ್ಮಿಕಾ ಎಂಟ್ರಿ ಮೂಲಕ ಸುದ್ದಿಯಾಗಿದೆ. ಚಿತ್ರಕ್ಕೀನ್ನು ಟೈಟಲ್‌ ಫೈನಲ್‌ ಆಗಿಲ್ಲ. ಅಲ್ಲು ಅರ್ಜುನ್‌ 20ನೇ ಸಿನಿಮಾ ಎನ್ನುವ ಕಾರಣಕ್ಕೆ ‘ಎಎ20’ ಹೆಸರಲ್ಲೇ ಸದ್ದು ಮಾಡುತ್ತಿದೆ. ಎಪ್ರಿಲ್‌ 8 ರಂದು ಸೋಮವಾರ ಅಲ್ಲು ಅರ್ಜುನ್‌ ಹುಟ್ಟು ಹಬ್ಬ ಆಚರಿಸಿಕೊಂಡರು.

ಟಾಲಿವುಡ್‌ ಮಟ್ಟಿಗೆ ನಟ ಅಲ್ಲು ಅರ್ಜುನ್‌ ಬಹುಬೇಡಿಕೆಯ ನಟ. ಸುಕುಮಾರ್‌ ನಿರ್ದೇಶನದ ‘ಆರ್ಯ’ಚಿತ್ರದೊಂದಿಗೆ ಟಾಲಿವುಡ್‌ನಲ್ಲಿ ಸ್ಟಾರ್‌ ನಟ ಎನಿಸಿಕೊಂಡವರು. ಸದ್ಯಕ್ಕೀಗ ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್‌ ನಿರ್ದೇಶನದ ಹೊಸ ಸಿನಿಮಾಕ್ಕೆ ಸಿದ್ಧತೆ ನಡೆಸಿದ್ದಾರೆ. ಆ ಚಿತ್ರಕ್ಕೂ ಚಿತ್ರೀಕರಣದ ತಯಾರಿ ನಡೆದಿದೆ. ಆ ನಡುವೆಯೇ ಸುಕುಮಾರ್‌ ನಿರ್ದೇಶನದ ಹೊಸ ಸಿನಿಮಾ ಸುದ್ದಿ ಮಾಡುತ್ತಿದೆ. ಒಂದೆಡೆ ಸ್ಟಾರ್‌ ನಟ ಅಲ್ಲು ಅರ್ಜುನ್‌ ಮತ್ತೊಂದೆಡೆ ಸ್ಟಾರ್‌ ನಿರ್ದೇಶಕ ಸುಕುಮಾರ್‌ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಪಡೆಯುವ ಮೂಲಕ ರಶ್ಮಿಕಾ ಟಾಲಿವುಡ್‌ನ ಬೇಡಿಕೆ ನಟಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಲಿಲ್ಲಿಗೆ ಈ ಹಾಡು ಡೆಡಿಕೇಟ್ ಮಾಡಿದ ವಿಜಯ್ ದೇವರಕೊಂಡ!