ಕೊಡಗಿನ ಕುವರಿ, ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಬಹು ಬೇಡಿಕೆ ನಟಿ. ಸ್ಯಾಂಡಲ್ ವುಡ್ ಜೊತೆಗೆ, ತಮಿಳು, ತೆಲುಗು ಚಿತ್ರರಂಗದಲ್ಲೂ ಸಖತ್ ಮಿಂಚುತ್ತಿದ್ದಾರೆ ಈ ಕಿರಿಕ್ ಹುಡುಗಿ. 

ದೇವರಕೊಂಡ ಬರ್ತಡೇಗೆ ಕರ್ನಾಟಕದ ಕ್ರಶ್ ವಿಶ್!

ತೆಲುಗು ಚಿತ್ರರಂಗದಲ್ಲಿ ರಶ್ಮಿಕಾಗೆ ಬ್ರೇಕ್ ಕೊಟ್ಟ ಸಿನಿಮಾ ‘ಗೀತಾ  ಗೋವಿಂದಂ’. ಈ ಚಿತ್ರದ ನಾಯಕ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಪೇರ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಗೀತಾ ಗೋವಿಂದಂ ಕ್ಲಿಕ್ ಆದ ನಂತರ ‘ಡಿಯರ್ ಕಾಮ್ರೆಡ್ ’ ಚಿತ್ರದಲ್ಲಿ ಈ ಜೋಡಿ ಮತ್ತೆ ಒಂದಾಗಿದ್ದಾರೆ.  

ಇತ್ತೀಚಿಗೆ ಹುಟ್ಟುಹಬ್ಬ ಆಚರಿಸಿಕೊಂಡ ವಿಜಯ್ ದೇವರಕೊಂಡಗೆ ‘ಡಿಯರ್ ಬಾಬಿ’ ಎಂದು ರಶ್ಮಿಕಾ ವಿಶ್ ಮಾಡಿದ್ದರು. ಬರೀ ವಿಶ್ ಮಾಡಿ ಸುಮ್ಮನಾಗಿಲ್ಲ. ಜೊತೆಗೆ ಬ್ರೇಸ್ ಲೇಟನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಗಿಫ್ಟನ್ನು ವಿಜಯ್ ಮೊದಲು ರಶ್ಮಿಕಾ ಕೈಗೆ ಹಾಕಿ ನಂತರ ತಾವು ಹಾಕಿಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

On the sets of #dearcomrade 😍❤️ #vijaydevarkonda #RashmikaMandanna #rashmikamandanna 😍❤️ #part1

A post shared by Rashmika Mandanna 🔵 (@rashmikaaa_mandanna) on May 10, 2019 at 7:03am PDT