ಸೌತ್ ಇಂಡಿಯನ್ ಮೋಸ್ಟ್ ಹ್ಯಾಂಡ್ಸಮ್ ನಟ ವಿಜಯ್ ದೇವರಕೊಂಡಗೆ ಇಂದು ಸ್ಪೆಷಲ್ ಡೇ. ಇಂದು ಅವರ ಬರ್ತಡೇ. ಕರ್ನಾಟಕದ ಕ್ರಶ್ ಹಾಗೂ ಅವರ ಕ್ರಶ್!? ಕೂಡಾ ಆಗಿರುವ ರಶ್ಮಿಕಾ ಮಂದಣ್ಣ ವಿಶ್ ಮಾಡಿದ್ದು ದೇವರಕೊಂಡ ಬರ್ತಡೇಯನ್ನು ಇನ್ನಷ್ಟು ಸ್ಪೆಷಲ್ ಆಗಿಸಿದೆ. 

ರಶ್ಮಿಕಾ ಹುಟ್ಟುಹಬ್ಬಕ್ಕೆ ವಿಜಯ್ ದೇವರಕೊಂಡ ಡಿಫರೆಂಟಾಗಿ ವಿಶ್ ಮಾಡಿದ್ದರು. ಇಂದು ರಶ್ಮಿಕಾ ಹೇಗೆ ವಿಶ್ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗಿತ್ತು. 

 

ವಿಜಯ್ ದೇವರಕೊಂಡ ಫೋಟೋ ಹಾಕಿ ‘ ಡಿಯರ್ ಬಾಬಿ, ಹ್ಯಾಪಿಯೆಸ್ಟ್ ಬರ್ತಡೇ ಟು ಯು, ನಿಮ್ಮ ಲಿಲ್ಲಿ' ಎಂದು ಟ್ವೀಟ್ ಮಾಡಿದ್ದಾರೆ. 

ಇದೇನು ಡಿಯರ್ ಬಾಬಿ ಎಂದು ಹೇಳಿದ್ದಾರಲ್ಲ ಎಂದು ಅಚ್ಚರಿಪಡಬೇಡಿ. ಇದು ರಶ್ಮಿಕಾ, ವಿಜಯ್ ದೇವರಕೊಂಡ ಮುಂಬರುವ ಚಿತ್ರ ‘ಡಿಯರ್ ಕಾಮ್ರೆಡ್’ ನಲ್ಲಿ ವಿಜಯ್ ಪಾತ್ರದ ಹೆಸರು. ರಶ್ಮಿಕಾ ಲಿಲ್ಲಿ ಪಾತ್ರದಲ್ಲಿ ನಟಿಸಿದ್ದಾರೆ.