ಮೊಟ್ಟಮೊದಲ ಬಾರಿಗೆ ತೆಲುಗು ಮಾಧ್ಯಮಗಳ ಮುಂದೆ ಮಾತನಾಡಿರುವ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕ್ ಅಪ್ ನಿಜವೆಂದು ಒಪ್ಪಿಕೊಂಡಿದ್ದಾರೆ. 

ಬೆಂಗಳೂರು :  ನಟ ರಕ್ಷಿತ್‌ ಶೆಟ್ಟಿಜತೆಗಿನ ಬ್ರೇಕಪ್‌ ಸುದ್ದಿಯನ್ನು ನಟಿ ರಶ್ಮಿಕಾ ಮಂದಣ್ಣ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಈ ಕುರಿತು ಮೊಟ್ಟಮೊದಲ ಬಾರಿಗೆ ತೆಲುಗು ಮಾಧ್ಯಮಗಳ ಮುಂದೆ ಮಾತನಾಡಿರುವ ರಶ್ಮಿಕಾ ಮಂದಣ್ಣ, ನಾನು ಮತ್ತು ರಕ್ಷಿತ್‌ ಶೆಟ್ಟಿಪರಿಚಯವಾಗಿದ್ದು ಕಿರಿಕ್‌ ಪಾರ್ಟಿ ಚಿತ್ರದ ಮೂಲಕ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಮ್ಮ ಈ ವೃತ್ತಿ ಪರಿಚಯ ಪ್ರೀತಿಯಾಗಿ ಬದಲಾಗುವುದಕ್ಕೆ ತುಂಬಾ ದಿನ ಹಿಡಿಯಲಿಲ್ಲ. ಕೊನೆಗೆ ನಮ್ಮಿಬ್ಬರ ಪ್ರೀತಿಯ ವಿಷಯವನ್ನು ನಾನೇ ಮೊದಲು ನಮ್ಮ ತಾಯಿ ಅವರ ಬಳಿ ಹೇಳಿಕೊಂಡೆ. ನಮ್ಮಿಬ್ಬರ ಪ್ರೀತಿ ವಿಷಯಕ್ಕೆ ನಮ್ಮ ತಾಯಿ ಯಾವುದೇ ರೀತಿಯಲ್ಲೂ ವಿರೋಧ ವ್ಯಕ್ತಪಡಿಸಲಿಲ್ಲ. ಸಂತೋಷವಾಗಿ ಒಪ್ಪಿಕೊಂಡರು ಎಂದು ಹೇಳಿದ್ದಾರೆ.

ಎರಡು ಕುಟುಂಬಗಳ ಒಪ್ಪಿಗೆಯಿಂದಲೇ ನಾವಿಬ್ಬರೂ ನಿಶ್ಚಿತಾರ್ಥ ಕೂಡ ಮಾಡಿಕೊಂಡೆವು. ಆದರೆ ಬರಬರುತ್ತಾ ನಮ್ಮಿಬ್ಬರ ನಡುವೆ ಕೆಲವು ಕಾರಣಗಳಿಗೆ ಮನಸ್ತಾಪ ಉಂಟಾಯಿತು. ಈ ಮನಸ್ತಾಪದಿಂದ ಇಬ್ಬರು ಜೊತೆಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅನಿಸಿತು. ಈ ಕಾರಣಕ್ಕೋಸ್ಕರ ನಾನು ಮತ್ತು ರಕ್ಷಿತ್‌ ಶೆಟ್ಟಿದೂರವಾಗಿದ್ದು ಈ ಬಗ್ಗೆ ಯಾರಿಗೂ ಏನೂ ಯಾರಿಗೂ ಏನೂ ಬೇಸರವಿಲ್ಲ. ಖುಷಿಯಿಂದಲೇ ದೂರವಾಗಿದ್ದೇವೆ ಎಂದು ರಶ್ಮಿಕಾ ಹೇಳಿದ್ದಾರೆ. ಈಗ ನನಗೆ ಸಿನಿಮಾ ಸಿನಿಮಾ ಬಿಟ್ಟು ಬೇರೆ ಯಾವುದೇ ರೀತಿಯ ಯೋಜನೆಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.