ಕಿರಿಕ್‌ ಪಾರ್ಟಿ ಚಿತ್ರ ಹಿಟ್‌ ಆಗಿದ್ದೇ ತಡ, ಚಿತ್ರದಲ್ಲಿ ಅಭಿನಯಿಸಿದ ಹೊಸ ಮುಖಗಳಿಗೆ ಭರ್ಜರಿ ಆಫರ್‌ಗಳ ಸುರಿಮಳೆಯೇ ಆಗುತ್ತಿದೆ.
ಬೆಂಗಳೂರು (ನ.19): ಕಿರಿಕ್ ಪಾರ್ಟಿ ಚಿತ್ರ ಹಿಟ್ ಆಗಿದ್ದೇ ತಡ, ಚಿತ್ರದಲ್ಲಿ ಅಭಿನಯಿಸಿದ ಹೊಸ ಮುಖಗಳಿಗೆ ಭರ್ಜರಿ ಆಫರ್ಗಳ ಸುರಿಮಳೆಯೇ ಆಗುತ್ತಿದೆ.
ಈ ಚಿತ್ರದ ಮೂಲಕ ಸ್ಯಾಂಡಲ್ವುಡ್'ಗೆ ಎಂಟ್ರಿ ನೀಡಿದವರಲ್ಲಿ ರಶ್ಮಿಕಾ ಮಂದಣ್ಣ ಒಬ್ಬರು. ಸಾನ್ವಿಯಾಗಿ ಕನ್ನಡಿಗರ ಹೃದಯಕ್ಕೆ ಲಗ್ಗೆಯಿಟ್ಟ ಚೆಲುವೆ ಈಗ ತೆಲುಗಿನಲ್ಲೂ ಮಿಂಚಲು ಸಿದ್ಧರಾಗಿದ್ದಾರೆ. ರಶ್ಮಿಕಾ ಮಂದಣ್ಣ ಕನ್ನಡವಷ್ಟೇ ಅಲ್ಲದೆ ಟಾಲಿವುಡ್ನಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಟಾಲಿವುಡ್ನಲ್ಲಿ ರಶ್ಮಿಕಾ ಅಭಿನಯದ 'ಚಲೋ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಖತ್ ವೈರಲ್ ಆಗಿದೆ. ಈಗಾಗಲೇ ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿದ್ದ ಈ ಚಿತ್ರ, ಟೀಸರ್ ಮೂಲಕ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.
ನಟ ನಾಗ ಶೌರ್ಯ ಅವರು ನಾಯಕರಾಗಿರುವ ಚಲೋ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿದ್ದು ವೆಂಕಿ ಕುಡುಮುಲು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮೆಹಟಿ ಸ್ವರ ಸಾಗರ್ ಸಂಗೀತ ಈ ಚಿತ್ರಕ್ಕಿದ್ದು ಕಿಶೋರ್ ಸತ್ಯ, ಅಚ್ಯುತ್ ಕುಮಾರ್, ರಘು ಬಾಬು, ಪ್ರಗತಿ ಸೇರಿ ಹಲವಾರು ನಟರು ಅಭಿನಯಿಸಿದ್ದಾರೆ.
