ಬಿಗ್ ಬಾಸ್ ಸೀಸನ್ 5 ವಿನ್ನರ್, ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಯಾವ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ? ಓದಿ.

ಕನ್ನಡ ಶೈನಿಂಗ್ ರ‍್ಯಾಪರ್ ಹಾಗೂ ಬಿಗ್‌ಬಾಸ್ ಸೀಸನ್ 5 ವಿನ್ನರ್ ದೇಶ ವಿದೇಶಗಳಲ್ಲಿ ಕಛೇರಿ ಕೊಡುತ್ತಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರ ಹೃದಯ ಕದ್ದ ಚಂದನ್, ಗಡಿನಾಡ ಕನ್ನಡಿಗರ ಹೃದಯ ಕದಿಯುವಲ್ಲಿಯೂ ಬ್ಯುಸಿಯಾಗಿದ್ದಾರೆ.

ವಾಷಿಂಗ್ಟನ್‌ನಲ್ಲಿ ಪ್ರೋಗ್ರಾಂ ಕೊಡುತ್ತಾ ಬ್ಯುಸಿಯಾಗಿರುವ ಚಂದನ್, ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಗಗನಚುಂಬಿ ಕಟ್ಟಡದ ಮೇಲೆ ನಿಂತು, 'ನಾನು ಸದಾ ಹತ್ತುತ್ತಿರುತ್ತೇನೆ. ನಂಗೆ ಎತ್ತರದ ಭಯವಿಲ್ಲ...' ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ.

'ಕನ್ನಡ ಕೋಗಿಲೆ' ರಿಯಾಲಿಟಿ ಶೋಗೆ ಜಡ್ಜ್ ಆಗಿರುವ ಚಂದನ್, ಆಗಾಗ 'ಆ್ಯಪಲ್' ಹೆಸರಿನ ನಾಯಿಯನ್ನೂ ಶೋಗೆ ಕರೆದುಕೊಂಡು ಬರುತ್ತಾರೆ. ಆದರೆ, ವಿದೇಶದಲ್ಲಿ ಕಾರ್ಯಕ್ರಮವಿದ್ದರೆ ಈ ರಿಯಾಲಿಟ ಶೋನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಸಾಧು ಕೋಕಿಲಾ ಸಂಗೀತ ನಿರ್ದೇಶನದಲ್ಲಿ ಅನೇಕ ಹಾಡುಗಳನ್ನು ಈಗಾಗಲೇ ಹಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಅನೇಕ ಚಿತ್ರಗಳಿಗೂ ಚಂದನ್ ಸಂಗೀತ ನಿರ್ದೇಶಿಸುತ್ತಿದ್ದಾರೆ.

ಚಂದನ್ ಹಾಗೂ ಬಿಗ್‌ಬಾಸ್ ಸ್ಪರ್ಧಿ ನಿವೇದಿತಾ ಕ್ಲೋಸ್ ಫ್ರೆಂಡ್ಸ್. ಆತ್ಮೀಯ ಗೆಳತಿಗೆ ಯುಎಸ್‌ನಿಂದ ಏನಾದ್ರೂ ಗಿಫ್ಟ್ ತರ್ತಾರಾ ನೋಡಬೇಕು.

View post on Instagram
View post on Instagram