ಮುಂಬೈ[ಜ.12]: ಮದುವೆಯಾದ ಬಳಿಕ ಜೀವನ ಬದಲಾಗುತ್ತದೆ ಎಂಬ ಮಾತಿದೆ. ಈ ಮಾತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ವರ್ತನೆ ನೋಡಿದ ಬಳಿಕ ನಿಜ ಎನ್ನಬಹುದೇನೋ. ಯಾಕೆಂದರೆ ರಣವೀರ್ ಸಿಂಗ್ ಜೊತೆ ಮದುವೆಯಾದಾಗಿನಿಂದ ವೈರಲ್ ಆಗುತ್ತಿರುವ ದೀಪಿಕಾರ ವರ್ತನೆ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಲಾರಂಭಿಸಿದೆ. ಸದ್ಯ ದೀಪಿಕಾ ಗಂಡ ರಣವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಈ ವಿಡಿಯೋದಲ್ಲಿ ದೀಪಿಕಾ ತಮ್ಮ ಗಂಡ ರಣವೀರ್ ನಂತೆ ಬಿಂದಾಸ್ ಆಗಿ ಮಜಾ ಮಾಡುತ್ತಿರುವುದು ನೋಡಬಹುದಾಗಿದೆ. ವಿಡಿಯೋದಲ್ಲಿ ದೀಪಿಕಾ 'ಏ ಆಯಾ ಪೊಲೀಸ್' ಎಂದಿದ್ದಾರೆ. ಇದನ್ನು ಶೇರ್ ಮಾಡಿಕೊಂಡಿರುವ ರಣವೀರ್ 'ಮೇರಿ ಟೀಚರ್ ಲೀಡರ್[ನನ್ನ ಟೀಚರ್ ಲೀಡರ್]' ಎಂದು ಬರೆದುಕೊಂಡಿದ್ದಾರೆ. 

 
 
 
 
 
 
 
 
 
 
 
 
 

My Cheerleader 😍❤️😘🥂 @deepikapadukone

A post shared by Ranveer Singh (@ranveersingh) on Jan 11, 2019 at 3:40am PST

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ವಿಚಿತ್ರ ಕಮೆಂಟ್ ಗಳು ಬರಲಾರಂಭಿಸಿವೆ. ಕೆಲವರು ದೀಪಿಕಾರ ಮೇಲೆ ರಣವೀರ್ ಸಿಂಗ್ ಪ್ರಭಾವ ಬಿದ್ದಿದೆ ಎಂದರೆ, ಮತ್ತೆ ಕೆಲವರು ಅಚ್ಚರಿಗೀಡಾಗಿದ್ದಾರೆ. ಈ ಮಧ್ಯೆ ದೀಪಿಕಾ ಕೂಡಾ ಕಮೆಂಟ್ ಮಾಡಿದ್ದು, 'ನಿನಗೆ ಮನೋರಂಜನೆ ನೀಡಲು ನಾನೇನು ಏನೇನು ಮಾಡಬೇಕಾಗುತ್ತದೆ' ಎಂದು ಗಂಡನ ಮೇಲೆ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಮದುವೆ ಬಳಿಕ ಈ ತಾರಾ ಜೋಡಿ ಸದ್ದು ಮಾಡುತ್ತಲೇ ಇದೆ. ಸದ್ಯ ಈ ಜೋಡಿ ಕಪಿಲ್ ದೇವ್ ರವರ ಜೀವನಾಧಾರಿತ '83' ಎಂಬ ಸಿನಿಮಾದಲ್ಲಿ ಒಟ್ಟಾಗಿ ನಟಿಸಲಿದ್ದಾರೆನ್ನಲಾಗಿದೆ. ರಣವೀರ್ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡರೆ, ದೀಪಿಕಾ ಕಪಿಲ್ ದೇವ್ ರವರ ಹೆಂಡತಿ ಪಾತ್ರ ನಿಭಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.