ಈಗ ಕೆಟ್ಟ ಸಿನಿಮಾಗಳನ್ನು ತಿರಸ್ಕರಿಸುವ ಧೈರ್ಯ ಬಂದಿದೆ ಎನ್ನುವ ಇಲಿಯಾನಗೆ ನಿಜಕ್ಕೂ ಧೈರ್ಯ ಬಂದಿದೆ ಅನ್ನಿಸುವುಕ್ಕೆ ಮತ್ತೊಂದು ಪುರಾವೆ ಇದೆ.

ಇಲಿಯಾನ ಡಿಕ್ರುಝ್ ಈಗ ಮತ್ತೆ ಸುದ್ದಿಯಲ್ಲಿದ್ದಾಳೆ. ಅದಕ್ಕೆ ಒಂದು ಕಾರಣ ವೃತ್ತಿ, ಇನ್ನೊಂದು ಕಾರಣ ಬಾಯ್‌ಫ್ರೆಂಡು. ‘ರುಸ್ತುಂ’ ಬಿಡುಗಡೆಯ ನಂತರ ಇಲಿಯಾನ ಎರಡು ಸಿನಿಮಾಗಳಲ್ಲಿ ನಟಿಸಿದ್ದಾಳೆ. ಅದೆರಡೂ ಬಿಡುಗಡೆಗೆ ಸಿದ್ಧವಾಗಿದೆ. ಅದರಲ್ಲಿ ಒಂದು ಅರ್ಜುನ್ ಕಪೂರ್ ಅಭಿನಯದ ‘ಮುಬಾರಕನ್’. ಇನ್ನೊಂದು ಅಜಯ್ ದೇವಗನ್, ಶಾಹಿದ್ ಕಪೂರ್ ನಿರ್ದೇಶನದ ‘ಬಾದ್‌ಶಾಹೋ’. ಈ ಮಧ್ಯೆ ಇಲಿಯಾನ ಒಂದಷ್ಟು ಸಿನಿಮಾಗಳನ್ನು ತಿರಸ್ಕರಿಸಿದ್ದಾರೆ. ದೊಡ್ಡ ದೊಡ್ಡ ಬ್ಯಾನರ್‌ನ ಸಿನಿಮಾಗಳನ್ನೂ ರಿಜೆಕ್ಟ್ ಮಾಡಿದ್ದಾರೆ. ಹನ್ನೊಂದು ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿದ್ದೇನೆ, ಈಗ ಕೆಟ್ಟ ಸಿನಿಮಾಗಳನ್ನು ತಿರಸ್ಕರಿಸುವ ಧೈರ್ಯ ಬಂದಿದೆ ಎನ್ನುವ ಇಲಿಯಾನಗೆ ನಿಜಕ್ಕೂ ಧೈರ್ಯ ಬಂದಿದೆ ಅನ್ನಿಸುವುಕ್ಕೆ ಮತ್ತೊಂದು ಪುರಾವೆ ಇದೆ. ಇಲಿಯಾನ ಲವ್ವಲ್ಲಿದ್ದಾರೆ. ಆಸ್ಟ್ರೇಲಿಯಾದ ಫೋಟೋಗ್ರಾಫರ್ ಆ್ಯಂಡ್ರ್ಯೂ ನೀಬೋನ್ ಅವರನ್ನು ಪ್ರೀತಿಸುತ್ತಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ ಹಾಕುವ ಮೂಲಕ ಘೋಷಿಸಿದ್ದಾರೆ. ಆದರೆ ಒಂದಷ್ಟು ಮಂದಿ ಆ್ಯಂಡ್ರ್ಯೂರನ್ನು ನೋಡಿ ಬ್ಯಾಡ್ ಚಾಯ್ಸ್ ಅಂತ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಇಲಿಯಾನ, ನನ್ನ ಪ್ರೇಮದ ಬಗ್ಗೆ ಯಾರಲ್ಲೂ ಹೇಳಬಾರದು ಅಂತ ಸಲಹೆ ಬಂದಿದ್ದರೂ ನಾನು ನನ್ನ ಸಂಬಂಧದ ಬಗ್ಗೆ ಹೇಳಿಕೊಂಡಿದ್ದೇನೆ. ಎಲ್ಲರೂ ಅದನ್ನು ಗೌರವಿಸಬೇಕು. ನನ್ನ ಬಾಯ್‌ಫ್ರೆಂಡ್ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎಂದಿದ್ದಾರೆ. ಇಲಿಯಾನರ ಈ ಮನವಿಯನ್ನು ಸೋಷಿಯಲ್ ಮೀಡಿಯಾದಲ್ಲಿರುವ ಮಂದಿ ಪುರಸ್ಕರಿಸುವುದು ಡೌಟು.