ರಣಬೀರ್ ಕಪೂರ್ ಹಾಗೂ ರಣವೀರ್ ಸಿಂಗ್ ತಮ್ಮ ಮುನಿಸನ್ನು ಮರೆತು ಒಂದಾಗಿದ್ದಾರೆ. ರಣವೀರ್ ಮದುವೆಗೆ ರಣಬೀರ್ ಹೋಗಿದ್ದೇ ಇದಕ್ಕೆ ಸಾಕ್ಷಿ. ಆದರೆ ವಿಷಯ ಇದಲ್ಲ. ಇಂಟರೆಸ್ಟಿಂಗ್ ವಿಚಾರ ಏನು ನೀವೇ ನೋಡಿ. 

ಬೆಂಗಳೂರು (ಜ. 01): ರಣಬೀರ್ ಕಪೂರ್ ಹಾಗೂ ರಣವೀರ್ ಸಿಂಗ್ ತಮ್ಮ ಮುನಿಸನ್ನು ಮರೆತು ಒಂದಾಗಿದ್ದಾರೆ. ರಣವೀರ್ ಮದುವೆಗೆ ರಣಬೀರ್ ಹೋಗಿದ್ದೇ ಇದಕ್ಕೆ ಸಾಕ್ಷಿ. ಆದರೆ ವಿಷಯ ಇದಲ್ಲ. 

ರಣಬೀರ್ ಕಪೂರ್ ಹಾಗೂ ರಣವೀರ್ ಸಿಂಗ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ತೊಂಬತ್ತರ ದಶಕದ ಸೂಪರ್ ಹಿಟ್ ಕಾಮಿಡಿ ಸಿನಿಮಾ ಅಂದಾಜ್ ಅಪ್ನಾ ಅಪ್ನಾ ಸಿಕ್ವೆಲ್ ನಲ್ಲಿ ಒಟ್ಟಿಗೆ ನಟಿಸುವ ಸಾಧ್ಯತೆ ಇದೆ. 

ಈ ಸುಳಿವನ್ನು ರಣವೀರ್ ಸಿಂಗ್ ಟ್ವಿಟರ್ ನಲ್ಲಿ ಹೇಳಿದ್ದಾರೆ. 

Scroll to load tweet…

ನಿರ್ದೇಶಕ ರೋಹಿತ್ ಶೆಟ್ಟಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಾವು ಅಂದಾಜ್ ಅಪ್ನಾ ಅಪ್ನಾ ಸಿನಿಮಾವನ್ನು ರಿಮೇಕ್ ಮಾಡುವುದಾದರೆ ರಣಬೀರ್ ಕಪೂರ್, ರಣವೀರ್ ಸಿಂಗ್ ನನ್ನು ಹಾಕಿಕೊಂಡು ಮಾಡುವುದಾಗಿ ಹೇಳಿದ್ದರು. ಇದೀಗ ರಣವೀರ್ ಸಿಂಗ್ ಮಾಡಿರುವ ಟ್ವೀಟ್ ಈ ಸಾಧ್ಯತೆಯನ್ನುಇನ್ನಷ್ಟು ಪುಷ್ಠೀಕರಿಸಿದೆ.