ರಣವೀರ್ ಸಿಂಗ್ - ದೀಪಿಕಾ ಪಡುಕೋಣೆ ಬಾಲಿವುಡ್‌ನ ಸ್ಟಾರ್ ಕಪಲ್ | ಇವರಿಬ್ಬರ ಸಂಬಂಧದ ಬಗ್ಗೆ ಅಧಿಕೃತವಾದ ಘೋಷಣೆ ಹೊರ ಬೀಳುವ ಸಾಧ್ಯತೆ | ಈ ವರ್ಷವಾದರೂ ಮದುವೆಯಾಗ್ತಾರಾ ದೀಪಿಕಾ- ರಣವೀರ್
ನವದೆಹಲಿ (ಅ. 08): ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಸಂಬಂಧದ ಬಗ್ಗೆ ಇನ್ನೂ ಬಾಯಿ ಬಿಟ್ಟಿಲ್ಲ. ಹಾಗಂತ ನಮಗಿಬ್ಬರಿಗೂ ಸಂಬಂಧ ಇಲ್ಲ ಎಂದೂ ತಳ್ಳಿ ಹಾಕುತ್ತಿಲ್ಲ. ಇವರಿಬ್ಬರೂ ಮದುವೆ ಆಗ್ತಾರಾ? ಹೌದು ಎನ್ನುತ್ತಿವೆ ಮೂಲಗಳು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ಶೋನಲ್ಲಿ ತಮ್ಮ ಬಾಯ್‌ಫ್ರೆಂಡ್ ಬಗ್ಗೆ ಮಾತನಾಡಲಿದ್ದಾರೆ ದೀಪಿಕಾ-ಆಲಿಯಾ!
ಬಾಲಿವುಡ್ ನ ಈ ಸ್ಟಾರ್ ಜೋಡಿ ನವರಾತ್ರಿಯಂದು ತಮ್ಮ ಮದುವೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಎಲ್ಲಾ ವದಂತಿಗಳಿಗೂ ತೆರೆ ಬೀಳಲಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ವರ್ಷ ನವೆಂಬರ್ ವೇಳೆಗೆ ಇಟಲಿಯಲ್ಲಿ ಮದುವೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
