ಶುರುವಾಗಲಿದೆ ಕಾಫಿ ವಿತ್ ಕರಣ್ | ದೀಪಿಕಾ ಪಡುಕೋಣೆ-ಅಲಿಯಾ ಭಟ್ ಮೊದಲ ಗೆಸ್ಟ್ಸ್! ತಮ್ಮ ತಮ್ಮ ಬಾಯ್‌ಫ್ರೆಂಡ್‌ಗಳ ಬಾಯ್ಬಿಡ್ತಾರಾ ಬೆಡಗಿಯರು?
ನವದೆಹಲಿ (ಸೆ. 28): ಬಾಲಿವುಡ್ ನ ಜನಪ್ರಿಯ ಶೋ ಕಾಫಿ ವಿತ್ ಕರಣ್ ರಿಯಾಲಿಟಿ ಶೋ ಭಾರೀ ಜನಪ್ರಿಯತೆ ಗಳಿಸಿತ್ತು. ಬಾಲಿವುಡ್ ನ ಬೇರೆ ಬೇರೆ ಸೆಲಬ್ರಿಟಿಗಳನ್ನು ಕರೆದು ಡಿಫರೆಂಟಾಗಿ ಪ್ರಶ್ನೆಗಳು ಕೇಳಿ ಕಾಲೆಳೆಯುವುದಕ್ಕೆ ಬಹಳ ಫೇಮಸ್!
ಇದೀಗ ಮತ್ತೆ ಕಾಲೆಳೆಯಲು ಸಿದ್ದರಾಗಿದ್ದಾರೆ ಕರಣ್ ಜೋಹರ್. ಮತ್ತೆ ಕಾಫಿ ವಿತ್ ಕರಣ್ ಆರಂಭವಾಗಲಿದೆ. ತಮ್ಮ ಟ್ವಿಟರ್ ಖಾತೆಯಲ್ಲಿ ಅಧಿಕೃತಗೊಳಿಸಿದ್ದಾರೆ ಕರಣ್ ಜೋಹರ್.
ಮೊದಲ ಎಪಿಸೋಡ್ ಗೆ ದೀಪಿಕಾ ಪಡುಕೋಣೆ ಹಾಗೂ ಅಲಿಯಾ ಭಟ್ ಬರಲಿದ್ದಾರೆ. ದೀಪಿಕಾ ಪಡುಕೋಣೆ ಬಾಯ್ ಫ್ರೆಂಡ್ ರಣವೀರ್ ಸಿಂಗ್ ಬಗ್ಗೆ ಮನದಾಳದ ಮಾತುಗಳನ್ನು ಬಿಚ್ಚಿಡಲಿದ್ದಾರೆ. ಅಲಿಯಾ ಭಟ್ ಫ್ರೆಂಡ್ ರಣಬೀರ್ ಕಪೂರ್ ಬಗ್ಗೆ ಮಾತನಾಡಲಿದ್ದಾರೆ.
ಇದೇ ಅಕ್ಟೋಬರ್ 21 ರಂದು ಕಾಫಿ ವಿತ್ ಕರಣ್ ಸೀಸನ್ 6 ಸ್ಟಾರ್ ವರ್ಡ್ ನಲ್ಲಿ ಪ್ರಾರಂಭವಾಗಲಿದೆ.
