ದೀಪಿಕಾ ಹಾಗೂ ರಣವೀರ್‌ ಅವರು ಇಟಲಿಯ ಲೇಕ್‌ ಕೊಮೊ ಎಂಬಲ್ಲಿ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದು ನ.10 ರಂದು ನಂದಿ ಪೂಜೆ ಹಮ್ಮಿಕೊಳ್ಳಲಿದ್ದಾರೆ ಎನ್ನಲಾಗಿದೆ. 

ಮುಂಬೈ[ಆ.24]: ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್‌ ಸಿಂಗ್‌ ಅವರು ನವೆಂಬರ್‌ 20ಕ್ಕೆ ಮದುವೆಗೆ ಮುನ್ನ ಬೆಂಗಳೂರಿನಲ್ಲಿರುವ ದೀಪಿಕಾ ಅವರ ನಿವಾಸದಲ್ಲಿ ವಿಶೇಷ ನಂದಿ ಪೂಜೆ ಹಮ್ಮಿಕೊಳ್ಳಲಾಗುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ಬಗ್ಗೆ ದೀಪಿಕಾ ಪಡುಕೋಣೆ ಅವರ ತಾಯಿ ಉಜ್ಜಲಾ ಪಡುಕೋಣೆ ಅವರು ನಂದಿ ದೇವಸ್ಥಾನದ ಅರ್ಚಕರೆ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ದೀಪಿಕಾ ಹಾಗೂ ರಣವೀರ್‌ ಅವರು ಇಟಲಿಯ ಲೇಕ್‌ ಕೊಮೊ ಎಂಬಲ್ಲಿ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದು ನ.10 ರಂದು ನಂದಿ ಪೂಜೆ ಹಮ್ಮಿಕೊಳ್ಳಲಿದ್ದಾರೆ ಎನ್ನಲಾಗಿದೆ.