ನವದೆಹಲಿ (ಜು. 31): ನಟ ಸಂಜಯ್ ದತ್ ಅವರ ವಿವಾದಾತ್ಮಕ ಜೀವನಾಧಾರಿತ ಸಂಜು ಚಿತ್ರದಲ್ಲಿನ ಅಮೋಘ ಅಭಿನಯ ರಣಬೀರ್ ಕಪೂರ್ ಅವರನ್ನು ಬಾಲಿವುಡ್ ಟೌನ್‌ನ ನೀಲಿ ಕಣ್ಣಿನ ಹುಡುಗನನ್ನಾಗಿಸಿದೆ.

ಅಲ್ಲದೆ, ಹಲವು ದಾಖಲೆಗಳನ್ನು  ಈಗಾಗಲೇ ಪುಡಿಗಟ್ಟಿರುವ ಸಂಜು ಚಿತ್ರ, ಇದೀಗ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ ಜಿಂದಾ ಹೈ ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆ. ರಾಷ್ಟ್ರಾದ್ಯಂತ ಬಿಡುಗಡೆಯಾದ 31 ದಿನಗಳಲ್ಲಿ ಸಂಜು ಚಿತ್ರವು 339.75 ಕೋಟಿ ರು. ಸಂಪಾದನೆ ಮಾಡಿದೆ. ಇದಕ್ಕೂ ಮುನ್ನ ಸಲ್ಮಾನ್ ಅಭಿನಯದ ಟೈಗರ್ ಜಿಂದಾ ಹೈ ಚಿತ್ರವು 31 ದಿನಗಳಲ್ಲಿ 339 ಕೋಟಿ ರು. ಗಳಿಸಿತ್ತು.