Alia Bhatt ‘ಆಲ್ಫಾ’ ಸಿನಿಮಾಗೆ ಬೆಂಬಲ ಸೂಚಿಸಲು ರಣಬೀರ್ ಕಪೂರ್ ‘My Wife’s An Alpha’ ಎಂದು ಬರೆದ ಟೀ-ಶರ್ಟ್ ಧರಿಸಿ ಗಮನ ಸೆಳೆದಿದ್ದಾರೆ. ಅವರ ಈ ಸ್ವೀಟ್ ಗೆಸ್ಚರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಪತ್ನಿ ಆಲಿಯಾ ಭಟ್ ಅವರ ಮುಂಬರುವ YRF ಸ್ಪೈ-ಡ್ರಾಮಾ ಚಿತ್ರಕ್ಕೆ ಬೆಂಬಲ ಸೂಚಿಸಲು ರಣಬೀರ್ ಕಪೂರ್ 'ನನ್ನ ಹೆಂಡ್ತಿ ಆಲ್ಫಾ' ಎಂದು ಬರೆದ ಟೀ-ಶರ್ಟ್ ಧರಿಸಿ ಗಮನ ಸೆಳೆದಿದ್ದಾರೆ. ಈ ಮೂಲಕ 'ಹಸ್ಬೆಂಡ್ ಗೋಲ್ಸ್'ಗೆ ಹೊಸ ಭಾಷ್ಯ ಬರೆದಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಾಲಿವುಡ್‌ನ ಮೋಸ್ಟ್ ಲವ್ಡ್ ಜೋಡಿಗಳಲ್ಲಿ ಒಬ್ಬರು.
ಇವರಿಬ್ಬರ ಕೆಮಿಸ್ಟ್ರಿ, ಒಬ್ಬರಿಗೊಬ್ಬರು ತೋರಿಸೋ ಪ್ರೀತಿಗೆ ಲಕ್ಷಾಂತರ ಅಭಿಮಾನಿಗಳು ಫಿದಾ ಆಗಿದ್ದಾರೆ. ತಮ್ಮ ಸಿನಿಮಾಗಳು ರಿಲೀಸ್ ಆಗುವಾಗ ಒಬ್ಬರಿಗೊಬ್ಬರು ಸಪೋರ್ಟ್ ಮಾಡೋದ್ರಲ್ಲಿ ಈ ಜೋಡಿ ಯಾವತ್ತೂ ಹಿಂದೆ ಬಿದ್ದಿಲ್ಲ. ಈಗ ಮತ್ತೊಮ್ಮೆ ರಣಬೀರ್, ಪತ್ನಿ ಆಲಿಯಾಗೆ ಸಪೋರ್ಟ್ ಮಾಡಲು ಒಂದು ಸೂಪರ್ ಕೂಲ್ ಟೀ-ಶರ್ಟ್ ಹಾಕಿಕೊಂಡು ಬಂದಿದ್ದಾರೆ. ಅದರ ಮೇಲೆ ‘my wife’s an alpha’ (ನನ್ನ ಹೆಂಡ್ತಿ ಆಲ್ಫಾ) ಅಂತ ಬರೆದಿತ್ತು.
ಆಲಿಯಾ ಭಟ್ 'ಆಲ್ಫಾ' ಚಿತ್ರಕ್ಕೆ ರಣಬೀರ್ ಸ್ವೀಟ್ ಗೆಸ್ಚರ್
ಹೌದು, ರಣಬೀರ್ ಇತ್ತೀಚೆಗೆ ಸಿಟಿಯಲ್ಲಿ ಕಾಣಿಸಿಕೊಂಡಾಗ ಅವರ ಈ ಟೀ-ಶರ್ಟ್ ಎಲ್ಲರ ಗಮನ ಸೆಳೆದು, ಅಭಿಮಾನಿಗಳ ಮನಗೆದ್ದಿದೆ. ಈ ಜೋಡಿ ಹೀಗೆ 'ಕಪಲ್ ಗೋಲ್ಸ್' ಸೆಟ್ ಮಾಡ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ರಣಬೀರ್ ಅವರ 'ಅನಿಮಲ್' ಸಿನಿಮಾ ರಿಲೀಸ್ ಟೈಮ್‌ನಲ್ಲಿ ಆಲಿಯಾ ಕೂಡ 'ಅನಿಮಲ್' ಟೀ-ಶರ್ಟ್ ಧರಿಸಿದ್ದರು. ಅಷ್ಟೇ ಅಲ್ಲ, 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಬಿಡುಗಡೆಗೂ ಮುನ್ನ ರಣಬೀರ್, ಆ ಸಿನಿಮಾದ ಫೇಮಸ್ 'ಗಂಗೂಬಾಯಿ ನಮಸ್ತೆ' ಪೋಸ್ ನೀಡಿ ಸಪೋರ್ಟ್ ಮಾಡಿದ್ದರು.
ಇವರಿಬ್ಬರ ಲವ್ ಲೈಫ್
ಈ ಜೋಡಿ ಏಪ್ರಿಲ್ 2022ರಲ್ಲಿ ತಮ್ಮ ಮನೆಯಲ್ಲೇ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದರು. ಅದೇ ವರ್ಷ ನವೆಂಬರ್‌ನಲ್ಲಿ ಇವರಿಗೆ ರಾಹಾ ಕಪೂರ್ ಎಂಬ ಹೆಣ್ಣು ಮಗು ಜನಿಸಿತು.
'ಆಲ್ಫಾ' ಸಿನಿಮಾ ಬಗ್ಗೆ
YRF ಸಂಸ್ಥೆಯ ಈ ಸ್ಪೈ ಡ್ರಾಮಾ ಚಿತ್ರದಲ್ಲಿ ಆಲಿಯಾ ಜೊತೆಗೆ ಶರ್ವರಿ ವಾಘ್, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ಜುಲೈ 3, 2026 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.


