Asianet Suvarna News Asianet Suvarna News

ನಟ ರಾಣಾ ದಗ್ಗುಬಾಟಿಯ ರೋಚಕ ಸತ್ಯ: ಇದು ಕಟ್ಟಪ್ಪನಿಗಿಂತಲೂ ಅತೀ ರಹಸ್ಯವಾದುದು

ಬಗ್ಗೆ ಅವರೇ ತೆಲಗು ಖಾಸಗಿ ವಾಹಿನಿ ಮೂಲಕ ಹಲವು ದಿನಗಳ ಹಿಂದೆಯೇ ಹೇಳಿಕೊಂಡಿದ್ದು, ಇದೀಗ ವೈರಲ್ ಆಗಿದೆ.

Rana Daggubati aka Bhallaladeva of Baahubali is blind in one eye
  • Facebook
  • Twitter
  • Whatsapp

ನವದೆಹಲಿ(ಮೇ.02): ‘ಬಾಹುಬಲಿ-2’ನ ಖ್ಯಾತ ನಟ, ರಾಜ ಬಲ್ಲಾಳದೇವನ ಪಾತ್ರಕ್ಕೆ ನೈಜ ಜೀವ ತುಂಬಿದ ರಾಣಾ ದಗ್ಗುಬಾಟಿ ಅವರಿಗೆ ಒಂದು ಕಣ್ಣು ಸಂಪೂರ್ಣವಾಗಿ ಕಾಣುವುದಿಲ್ಲವಂತೆ! ಈ ಬಗ್ಗೆ ಅವರೇ ತೆಲಗು ಖಾಸಗಿ ವಾಹಿನಿ ಮೂಲಕ ಹಲವು ದಿನಗಳ ಹಿಂದೆಯೇ ಹೇಳಿಕೊಂಡಿದ್ದು, ಇದೀಗ ವೈರಲ್ ಆಗಿದೆ.

ಸಾರ್ವಜನಿಕರು ತಮಗೆ ಎದುರಾದ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತಾದ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ‘ನನಗೆ ಬಲಗಣ್ಣು ಸಂಪೂರ್ಣವಾಗಿ ಕಾಣುವುದಿಲ್ಲ. ಅಲ್ಲದೆ, ಎಡಗಣ್ಣು ಸಹ ಸತ್ತ ವ್ಯಕ್ತಿ ನನಗೆ ದಾನವಾಗಿ ನೀಡಿದ್ದು’ ಎಂದು ಹೇಳಿದ್ದಾರೆ. ಈ ಎಡಗಣ್ಣನ್ನು ಮುಚ್ಚಿದ್ದೇ ಆದಲ್ಲಿ, ನನಗೇನು ಕಾಣುವುದಿಲ್ಲ ಎಂದು ಅವರು ಅಂದು ಹೇಳಿಕೊಂಡಿದ್ದಾರೆ. ಆ ವಿಡಿಯೊ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

Follow Us:
Download App:
  • android
  • ios