ಕ್ರಿಕೆಟ್ ಆಟದಲ್ಲಿ ಭಯೋತ್ಪಾದಕರ ಕೈವಾಡ ಎನ್ನುವ ವಿಷಯವನ್ನಾಧಾರಿತ ಸಿನಿಮಾ ಇದಾಗಿದೆ ಎಂದು ರಮೀಜ್ ಹೇಳಿದ್ದಾರೆ.

ಕರಾಚಿ(ಫೆ.3): ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಸೆಕೆಂಡ್ ಇನಿಂಗ್ಸ್ ಎಂಬಂತೆ ಸಿನಿಮಾ ಕ್ಷೇತ್ರದತ್ತ ದೃಷ್ಠಿ ಹಾಯಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದರಂತೆ ತಾವೇ ನಿರ್ಮಿಸುತ್ತಿರುವ ಹೊಸ ಚಿತ್ರಕ್ಕೆ ಬಾಲಿವುಡ್ ನಟ ಸಂಜಯ್ ದತ್ ಅವರೇ ನಾಯಕರಾಗಬೇಕು. ಇನ್ನು ನಾಯಕಿಯಾಗಿ ಬಾಲಿವುಡ್ ನಟಿ ಕತ್ರೀನಾ ಕೈಫ್ ಅಥವಾ ಪಾಕಿಸ್ತಾನ ನಟಿ ಮಹಿರಾ ಖಾನ್ ಸೂಕ್ತ ಎಂದು ರಮೀಜ್ ಜಿಯೊ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನಟಿ ಮಹಿರಾ ಖಾನ್ ಮತ್ತು ಕತ್ರೀನಾ ಕೈಫ್ ಪ್ರತಿಭಾನ್ವಿತ ನಟಿಯರಾಗಿದ್ದಾರೆ ಎಂದಿರುವ ಅವರು, ಕ್ರಿಕೆಟ್ ಆಟದಲ್ಲಿ ಭಯೋತ್ಪಾದಕರ ಕೈವಾಡ ಎನ್ನುವ ವಿಷಯವನ್ನಾಧಾರಿತ ಸಿನಿಮಾ ಇದಾಗಿದೆ ಎಂದು ರಮೀಜ್ ಹೇಳಿದ್ದಾರೆ.