ಈ ಟೈಟಲ್ ನೋಡಿದ ಯಾರಿಗಾದರೂ ಇದು ಜಯಲಲಿತಾ ಗೆಳತಿ ಶಶಿಕಲಾ ಅವರ ಕಥೆ ಆದರಿಸಿದ ಚಿತ್ರ ಎಂದು ಗೊತ್ತಾಗುತ್ತೆ. ಆದರೆ, ವರ್ಮಾ ಮಾತ್ರ ಇದು ಕಾಲ್ಪನಿಕ ಕಥೆ ಎನ್ನುತ್ತಿದ್ದಾರೆ. ಗುರುವಾರ ಟೈಟಲ್ ರಿಜಿಸ್ಟರ್ ಮಾಡಿಸಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಚೆನ್ನೈ(ಡಿ.16): ಸತ್ಯ ಘಟನೆಗಳನ್ನ ಆಧರಿಸಿ ಸಿನಿಮಾ ಮಾಡುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಜಯಲಲಿತಾಳ ಆತ್ಮ ಸಖಿ ಎಂದೇ ಕರೆಯಲಾಗುವ ಶಶಿಕಲಾ ನಟರಾಜನ್ ಹೆಸರಿನಲ್ಲಿ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. ತಮ್ಮ ಮೂಮದಿನ ಚಿತ್ರದ ಟೈಟಲ್ ಶಶಿಕಲಾ ಎಂದು ಘೋಷಿಸಿರುವ ರಾಮ್ ಗೋಪಾಲ್ ವರ್ಮಾ, ರಾಜಕಾರಣಿಯ ಆತ್ಮೀಯ, ಪ್ರೀತಿಯ ಗೆಳತಿ ಎಂದು ಟ್ಯಾಗ್ ಲೈನ್ ಕೊಟ್ಟಿದ್ದಾರೆ.