ಸ್ಯಾಂಡಲ್‌ವುಡ್ ಬಿಗ್ ಬಜೆಟ್ ಸಿನಿಮಾ ಕುರುಕ್ಷೇತ್ರ ದೇಶದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಈಗಾಗಲೇ 100 ಕೋಟಿ ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಜಗ್ಗೇಶ್ ಹೇಳಿದ ಮಾತನ್ನು ಪ್ರೂವ್ ಮಾಡಿ ತೊಡೆ ತಟ್ಟಿದ ಡಿ-ಬಾಸ್!

ಇನ್ನು ರಾಮನಗರ, ಮಂಡ್ಯ, ಮೈಸೂರು ಸುತ್ತಮುತ್ತ ದರ್ಶನ್ ಹವಾ ಜೋರಾಗಿದ್ದು ಶಾಲಾ ಕಾಲೇಜುಗಳು ಸಿನಿಮಾ ವೀಕ್ಷಿಸಲು ಮಕ್ಕಳನ್ನು ಥಿಯೇಟರ್‌ಗೆ ಕರೆದುಕೊಂಡು ಹೋಗಿರುವ ವಿಡಿಯೋ ವೈರಲ್ ಆಗುತ್ತಿದೆ.

 

 
 
 
 
 
 
 
 
 
 
 
 
 

#dboss #dbosscraze

A post shared by ★·.·.·★✌D ฿ŐŚŚ fan's ★·.·★ (@d_boss_fans_7999) on Aug 29, 2019 at 6:25pm PDT

ಕನ್ನಡ ಚಿತ್ರರಂಗದ ಮೊದಲ 3D ಐತಿಹಾಸಿಕ ಸಿನಿಮಾ ಕುರುಕ್ಷೇತ್ರ ಮಹಾಭಾರತ ಕಥೆಯನ್ನು ಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಸುತ್ತದೆ. ಮಹಾಭಾರತದಲ್ಲಿ ಬರುವ ಪಾತ್ರಗಳನ್ನು ಪರಿಚಯ ಮಾಡಿ ಕೊಡುತ್ತದೆ. ಇಂತಹ ಬೆಳವಣಿಗೆಗಳು ನಮ್ಮ ಸ್ಯಾಂಡಲ್‌ವುಡ್‌ ನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವುದು ಗ್ಯಾರಂಟಿ!