ಲವ್‌ಗೂ ಸೈ ಮಾಸ್ ಸ್ಟೋರಿಗೂ ಸೈ ಈ ನಿರ್ದೇಶಕ. ಬಟ್ ಅವರೇ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡು ತಕರಾರು ತೆಗೆಯುವವರಿಗೆ ಎಚ್ಚರಿಸಿದ್ದಾರೆ.
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ಟಿಆರ್ ಬಯೋಪಿಕ್ ‘ಎನ್‌ಟಿಆರ್ ಕಥಾನಾಯಕುಡು’ ಸಿನಿಮಾ ತೆರೆ ಕಂಡ ನಂತರ ಮತ್ತೊಮ್ಮೆ ‘ಲಕ್ಷ್ಮೀಸ್ ಎನ್‌ಟಿರ್’ ಚಿತ್ರವೂ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರ ಬಿಡುಗಡೆ ವೇಳೆ ಯಾರಾದರೂ ಖ್ಯಾತೆ ತೆಗೆಯಬಹುದೆಂದು ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರೇ ಹೊಸ ಐಡಿಯಾ ಕಂಡು ಕೊಂಡಿದ್ದಾರೆ. ಅವರ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡು, ಖ್ಯಾತೆ ತೆಗೆಯುವವರನ್ನು ಎಚ್ಚರಿಸಿದ್ದಾರೆ.
'ಎನ್‌ಟಿಆರ್ ನಾಯಕುಡು ಅಲ್ಲ, ಎನ್‌ಟಿಆರ್ ಕಥಾನಾಯಕುಡು ಅಲ್ಲ. ನಿಜವಾದ ಎನ್‌ಟಿಆರ್ ಬಗ್ಗೆ ಲಕ್ಷ್ಮೀಸ್ ಎನ್‌ಟಿಆರ್ ಮೂಲಕ ತೆಲುಗು ಪ್ರೇಕ್ಷಕರಿಗೆ ತೋರಿಸುತ್ತಿದ್ದೇನೆ. ಇನ್ನು ರಿಲೀಸ್ ಸಮಯದಲ್ಲಿ ಯಾರಾದ್ರೂ ಅಡ್ಡ ಬಂದ್ರೇ....’ಎಂದು ಹೇಳಿ ಮಚ್ಚು ಹಿಡಿದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಇನ್ನು ಈ ಚಿತ್ರ ಎನ್‌ಟಿಆರ್ ಹಾಗೂ ಅವರ ಎರಡನೇ ಪತ್ನಿ ಲಕ್ಷ್ಮೀ ಪಾರ್ವತಿ ಕುರಿತ ಚಿತ್ರ. ಟಾಲಿವುಡ್‌ನಲ್ಲಿ ವಿವಾದಿತ ಕಥಾವಸ್ತುವುಳ್ಳ ಚಿತ್ರ ಎನ್ನಲಾಗುತ್ತದೆ. ಈ ಚಿತ್ರದ ನಾಯಕಿಯಾಗಿ ‘ಉಳಿದವರು ಕಂಡಂತೆ ’ಖ್ಯಾತಿಯ ಯಜ್ಞಾ ಶೆಟ್ಟಿ.
ಎನ್‌ಟಿಆರ್ ಬಯೋಪಿಕ್‌ನ ಮೊದಲ ಭಾಗವಾಗಿ ಕಥಾನಾಯಕುಡು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಎರಡನೇ ಭಾಗವಾಗಿ ಮಹಾನಾಯಕುಡು ಫೆಬ್ರವರಿಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಇನ್ನು ಮೂರನೇ ಭಾಗವಾಗಿ ‘ಲಕ್ಷ್ಮೀಸ್ ಎನ್‌ಟಿಆರ್’ಎಷ್ಟರ ಮಟ್ಟಕ್ಕೆ ಜನರಿಗೆ ಹತ್ತಿರವಾಗುತ್ತದೋ ಕಾದು ನೋಡಬೇಕು.
