ಬೆಂಗಳೂರು (ಜು. 20): ಬಾಕ್ಸಾಫೀಸ್ ಬ್ಲಾಕ್ ಬಸ್ಟರ್ ಮೂವಿ ’ಸಂಜು’ ಯಶಸ್ಸಿನ ನಂತರ ರಾಮ್ ಗೋಪಾಲ್ ವರ್ಮಾ ಇನ್ನೊಂದು ಚಿತ್ರ ಮಾಡಲು ಮುಂದಾಗಿದ್ದಾರೆ. 

ಸಂಜು ಚಿತ್ರದಲ್ಲಿ ಸಂಜಯ್ ದತ್’ರನ್ನು ಸರಿಯಾಗಿ ಬಿಂಬಿಸಿಲ್ಲ. 1993 ರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್’ರನ್ನು ಸಾಫ್ಟ್ ಆಗಿ ತೋರಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. 

ಈ ಬಗ್ಗೆ ನಿರ್ದೇಶಕ ಆರ್’ಜಿವಿ ಮಾತನಾಡಿ, ಸಂಜಯ್ ದತ್’ರ ಜೀವನಾಧಾರಿತ ಕಥೆಯನ್ನು ಇಟ್ಟುಕೊಂಡು ಇನ್ನೊಂದು ಸಿನಿಮಾ ಮಾಡುವೆ. ಅದರಲ್ಲಿ ಅವರನ್ನು ಸರಿಯಾಗಿ ಬಿಂಬಿಸಲಾಗುವುದು ಎಂದು ಹೇಳಿದ್ದಾರೆ. 

ಈ ಚಿತ್ರವನ್ನು ಸಂಜು ಪಾತ್ರವನ್ನು ಯಾರು ಮಾಡುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಇನ್ನೊಂದು ಸಿನಿಮಾ ಮಾಡುವ ಬಗ್ಗೆ ಖುದ್ದು ಸಂಜಯ್ ದತ್ ಇನ್ನೂ ಪ್ರತಿಕ್ರಿಯಿಸಿಲ್ಲ. 

ಇತ್ತೀಚಿಗೆ ಬಿಡುಗಡೆಯಾದ ಸಂಜು ಚಿತ್ರ ನಾಗಾಲೋಟದಲ್ಲಿ ಓಡುತ್ತಿದೆ. ಬಾಕ್ಸಾಫೀಸ್’ನಲ್ಲಿ 300 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಪರೇಶ್ ರಾವಲ್ ಸಂಜಯ್ ದತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.